ನವದೆಹಲಿ:ತಮಿಳುನಾಡಿನಲ್ಲಿ ನಾಲ್ಕು ದಿನಗಳ ಕಾಲ ನಡೆಯುವ ಪೊಂಗಲ್ ಹಬ್ಬಕ್ಕೆ ಚಾಲನೆ ಸಿಕ್ಕಿದೆ. ಸುಗ್ಗಿ ಹಬ್ಬ ಎಂದೇ ಕರೆಯಲಾಗುವ ಈ ಹಬ್ಬಕ್ಕೆ ಜನರು ಸಡಗರದಿಂದ ಸಜ್ಜಾಗಿದ್ದು, ಭರ್ಜರಿಯಾಗೇ ಹಬ್ಬ ಆಚರಣೆ ಮಾಡುತ್ತಿದ್ದಾರೆ.
ಚೆನ್ನೈನಲ್ಲಿ ಹಬ್ಬ ಕಳೆಕಟ್ಟಿದೆ. ಅಲ್ಲಿ ಈ ಹಬ್ಬಕ್ಕೆ ಪೊಂಗಲ್ ಎಂದು ಕರೆಯಲಾಗುತ್ತದೆ. ತೆಲಂಗಾಣ ಮತ್ತು ಆಂಧ್ರ ಪ್ರದೇಶದಲ್ಲಿ ಸಂಕ್ರಾಂತಿಯನ್ನ ಭೋಗಿ ಎಂದು ಆಚರಣೆ ಮಾಡಲಾಗುತ್ತದೆ.
ಕರ್ನಾಟಕದಲ್ಲಿ ಈ ಹಬ್ಬವನ್ನ ಮಕರ ಸಂಕ್ರಾಂತಿ ಎಂಬ ಹೆಸರಿನಲ್ಲಿ ಆಚರಿಸಲಾಗುತ್ತದೆ. ಹೆಂಗಳೆಯರು ಮನೆ ಮುಂದೆ ರಂಗೋಲಿ ಬಿಡಿಸಿ ಸಂಭ್ರಮ ಪಡುತ್ತಾರೆ.
ಇನ್ನು ಗುಜರಾತ್ನಲ್ಲಿ ಇದು ಗಾಳಿಪಟಗಳ ಹಬ್ಬ ಎಂದೇ ಪ್ರಸಿದ್ಧಿ. ಇದಕ್ಕೆ ಪೂರಕ ಎಂಬಂತೆ ಗುಜರಾತ್ನಲ್ಲಿ ದೊಡ್ಡ ಮಟ್ಟದ ಗಾಳಿಪಟ ಉತ್ಸವ ನಡೆಯುತ್ತದೆ. ಮತ್ತೊಂದು ಕಡೆ ಜಾರ್ಖಂಡ್ನಲ್ಲಿ ಸುಗ್ಗಿ ಹಬ್ಬವಾಗಿ ತುಸು ಎಂಬ ಆಚರಣೆ ಮಾಡಲಾಗುತ್ತದೆ. ರಾಂಚಿಯಲ್ಲಿ ಈ ಹಬ್ಬವನ್ನ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.