ಕರ್ನಾಟಕ

karnataka

ETV Bharat / bharat

ಕಂಗನಾ ಕಚೇರಿ ಧ್ವಂಸ ಪ್ರಕರಣ: ಶಿವಸೇನಾ ನಾಯಕ ಸಂಜಯ್​ ರಾವತ್​ ಹೇಳಿದ್ದೇನು? - kangana

ಮಹಾರಾಷ್ಟ್ರ ಸರ್ಕಾರ ಮತ್ತು ನಟಿ ಕಂಗನಾ ರಣಾವತ್​ ನಡುವೆ ವೈರತ್ವ ಹೆಚ್ಚುತ್ತಲೇ ಇದ್ದು, ಈ ನಡುವೆ ಶಿವಸೇನಾ ನಾಯಕ ಸಂಜಯ್​ ರಾವತ್​ ಘಟನೆ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.

sanjay raut on kangana contraversary
ಕಂಗನಾ ಕಚೇರಿ ಧ್ವಂಸ ಪ್ರಕರಣ: ಶಿವಸೇನಾ ನಾಯಕ ಸಂಜಯ್​ ರಾವತ್​ ಹೇಳಿದ್ದೇನು?

By

Published : Sep 10, 2020, 10:38 AM IST

ಮುಂಬೈ: ಮಹಾರಾಷ್ಟ್ರ ಸರ್ಕಾರ ಮತ್ತು ನಟಿ ಕಂಗನಾ ರಣಾವತ್​ ನಡುವೆ ವೈರತ್ವ ಹೆಚ್ಚುತ್ತಲೇ ಇದೆ. ಈ ನಡುವೆ ಶಿವಸೇನಾ ನಾಯಕ ಸಂಜಯ್​ ರಾವತ್​ ಘಟನೆ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ನಾನು ಯಾವತ್ತೂ ಕಂಗನಾಗೆ ಬೆದರಿಕೆಯೊಡ್ಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮುಂಬೈಯನ್ನು ಪಿಒಕೆಗೆ ಹೋಲಿಸಿದ್ದಕ್ಕೆ ನಾನು ಆಕ್ರೋಶ ವ್ಯಕ್ತಪಡಿಸಿದ್ದೆ ಎಂದಿದ್ದಾರೆ.

''ಮುಂಬೈನಲ್ಲಿ ವಾಸಿಸಲು ಕಂಗನಾಗೆ ಯಾವುದೇ ತೊಂದರೆ ಇಲ್ಲ, ಆಕೆಯನ್ನು ನಾನು ಮುಂಬೈಗೆ ಸ್ವಾಗತಿಸುತ್ತೇನೆ'' ಎಂದು ಹೇಳಿದ್ದಾರೆ. ಬಿಎಂಸಿ ನಡೆಸಿದ ತೆರವು ಕಾರ್ಯಾಚರಣೆಗೂ ನನಗೂ ಯಾವುದೇ ಸಂಬಂಧ ಇಲ್ಲ. ನನಗೆ ಇದು ಮುಗಿದ ವಿಷಯ ಎಂದು ಸಂಜಯ್​ ರಾವತ್​ ಪ್ರತಿಕ್ರಿಯೆ ನೀಡಿದ್ದಾರೆ.

ಇದೇ ವೇಳೆ, ಮುಂಬೈನಲ್ಲಿರುವ ಕಂಗನಾ ಕಚೇರಿಯನ್ನು ನೆಲಸಮ ಮಾಡದಂತೆ ಬಿಎಂಸಿಗೆ ಬಾಂಬೆ ಹೈಕೋರ್ಟ್​ ಆದೇಶ ನೀಡಿದೆ.

ನಟಿ ಮುಂಬೈಯನ್ನು ಪಿಒಕೆಗೆ ಹೋಲಿಸಿದ ನಂತರ ಸಂಜಯ್​ ರಾವತ್​ ಮತ್ತು ಕಂಗನಾ ನಡುವೆ ವಾಗ್ಯುದ್ಧ ತಾರಕಕ್ಕೇರಿತ್ತು. ಮುಂಬೈಗೆ ಕಾಲಿಡಬೇಡಿ ಎಂದು ಸಂಜಯ್​ ರಾವತ್​ ನನಗೆ ಬೆದರಿಕೆ ಹಾಕಿದ್ದಾರೆ ಎಂದು ಕಂಗನಾ ಹೇಳಿದ್ದರು. ಶಿವಸೇನಾ ನಾಯಕ ಈ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ. ನಿನ್ನೆಯಷ್ಟೇ ಕಂಗನಾ ಬಿಗಿ ಭದ್ರತೆಯಲ್ಲಿ ಮುಂಬೈಗೆ ಆಗಮಿಸಿದ್ದರು.

ಮುಂಬೈಗೆ ಬಂದ ಕೂಡಲೇ ಕಂಗನಾ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು. ಈ ವಿಡಿಯೋದಲ್ಲಿ ಮಹಾರಾಷ್ಟ್ರ ಸಿಎಂ ಉದ್ಧವ್​ ಠಾಕ್ರೆಯವರನ್ನೇ ಗುರಿಯಾಗಿರಿಸಿದ್ದರು. ಮಹಾರಾಷ್ಟ್ರ ಸರ್ಕಾರ ನನ್ನ ಮನೆಯನ್ನು ಧ್ವಂಸ ಮಾಡಿದಂತೆಯೇ ನಿಮ್ಮ ಅಹಂಕಾರ ಸರ್ವನಾಶವಾಗಲಿದೆ ಎಂದು ವಾರ್ನ್​ ಮಾಡಿದ್ದರು.

ದಿಯಾ ಮಿರ್ಜಾ, ರೇಣುಕಾ ಶಹಾಣೆ, ಸೋನಲ್​ ಚೌಹಾಣ್​​ ಸೇರಿದಂತೆ ಅನೇಕ ಬಾಲಿವುಡ್​ ಸೆಲೆಬ್ರಿಟಿಗಳು ಕಂಗನಾ ಕಚೇರಿಯನ್ನು ಧ್ವಂಸಗೊಳಿಸಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details