ಕರ್ನಾಟಕ

karnataka

ETV Bharat / bharat

ಸಿವಿಸಿ ನೂತನ ಮುಖ್ಯಸ್ಥರಾಗಿ ಸಂಜಯ ಕೋಠಾರಿ ಅಧಿಕಾರ ಸ್ವೀಕಾರ - ಪಿಇಎಸ್​ಬಿ ಮುಖ್ಯಸ್ಥ

ಸಿವಿಸಿಯ ನೂತನ ಮುಖ್ಯಸ್ಥರಾಗಿ 1978ರ ಹರಿಯಾಣ ಬ್ಯಾಚಿನ ಐಎಎಸ್ ಅಧಿಕಾರಿ ಸಂಜಯ ಕೋಠಾರಿ ಇಂದು ಅಧಿಕಾರ ವಹಿಸಿಕೊಂಡರು.

Sanjay Kothari takes oath as Central Vigilance Commissioner
Sanjay Kothari takes oath as Central Vigilance Commissioner

By

Published : Apr 25, 2020, 7:36 PM IST

ಹೊಸದಿಲ್ಲಿ: ಕೇಂದ್ರೀಯ ವಿಚಕ್ಷಣಾ ಆಯೋಗದ (ಸಿವಿಸಿ) ನೂತನ ಮುಖ್ಯಸ್ಥರಾಗಿ ಸಂಜಯ ಕೋಠಾರಿ ಅಧಿಕಾರ ಸ್ವೀಕರಿಸಿದರು. ರಾಷ್ಟ್ರಪತಿ ರಾಮನಾಥ ಕೋವಿಂದ್, ರಾಷ್ಟ್ರಪತಿ ಭವನದಲ್ಲಿ ಇಂದು ಸಂಜಯ ಕೋಠಾರಿ ಅವರಿಗೆ ಅಧಿಕಾರ ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು. ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

ಸಂಜಯ ಕೋಠಾರಿ 1978ರ ಹರಿಯಾಣ ಬ್ಯಾಚಿನ ಐಎಎಸ್ ಅಧಿಕಾರಿಯಾಗಿದ್ದಾರೆ. ಸಿಬ್ಬಂದಿ ಹಾಗೂ ತರಬೇತಿ ಸಚಿವಾಲಯದ ಕಾರ್ಯದರ್ಶಿಯಾಗಿದ್ದ ಅವರು 2016 ರಲ್ಲಿ ನಿವೃತ್ತಿಯಾಗಿದ್ದರು. 2016 ರ ನವೆಂಬರ್​ನಲ್ಲಿ ಸರಕಾರ ಅವರನ್ನು ಪಿಇಎಸ್​ಬಿ ಮುಖ್ಯಸ್ಥರನ್ನಾಗಿ ನೇಮಿಸಿತ್ತು. ನಂತರ ಜುಲೈ 2017 ರಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್​ ಅವರ ಕಾರ್ಯದರ್ಶಿಯಾಗಿ ಕೋಠಾರಿ ನೇಮಕವಾಗಿದ್ದರು.

ABOUT THE AUTHOR

...view details