ಇಂದೋರ್(ಮಧ್ಯಪ್ರದೇಶ) :ಇಂದೋರ್ ಜಿಲ್ಲೆಯ ನೈರ್ಮಲ್ಯ ಕಾರ್ಮಿಕರು ಕೇವಲ ಸ್ವಚ್ಛಗೊಳಿಸುವ ಕೆಲಸವಲ್ಲದೆ ಕೊರೊನಾದಿಂದ ಮೃತರಾದವರ ಅಂತ್ಯಕ್ರಿಯೆಯ ಅಂತಿಮ ವಿಧಿವಿಧಾನ ಪೂರೈಸಿ ಮಾನವೀಯತೆ ಮೆರೆಯುತ್ತಿದ್ದಾರೆ. ಕೊರೊನಾ ಹರಡುತ್ತದೆ ಎಂಬ ಭೀತಿಯಿಂದಾಗಿ ಕೋವಿಡ್-19ನಿಂದ ಮೃತಪಟ್ಟ ವ್ಯಕ್ತಿಯ ಕೆಲವೇ ಸಂಬಂಧಿಗಳಿಗೆ ಮಾತ್ರ ಮೃತನನ್ನು ನೋಡಲು ಹಾಗೂ ಅಂತ್ಯಕ್ರಿಯೆಯ ವಿಧಿವಿಧಾನ ನೆರವೇರಿಸಲು ಅವಕಾಶ ನೀಡಲಾಗಿದೆ. ಆದರೆ, ಕೆಲವೇ ಕುಟುಂಬ ಸದಸ್ಯರು ಶವಸಂಸ್ಕಾರ ನಡೆಸಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆ ನೈರ್ಮಲ್ಯ ಕಾರ್ಮಿಕರು ಇವರ ಸಂಬಂಧಿಗಳಾಗಿ ನಿಲ್ಲುತ್ತಿದ್ದಾರೆ.
ಕೊರೊನಾದಿಂದ ಯಾರೇ ಮೃತರಾದರೂ ಸ್ವಚ್ಛತಾ ಕಾರ್ಮಿಕರಿಂದಲೇ ಅಂತ್ಯಕ್ರಿಯೆ.. - ಮಧ್ಯಪ್ರದೇಶ
ಕೊರೊನಾದಿಂದ ಮೃತಪಟ್ಟ ವ್ಯಕ್ತಿಯ ಕೆಲವೇ ಸಂಬಂಧಿಗಳಿಗೆ ಮಾತ್ರ ಮೃತನನ್ನು ನೋಡಲು ಹಾಗೂ ಅಂತಿಮ ವಿದಿವಿಧಾನ ನೆರವೇರಿಸಲು ಅವಕಾಶ ನೀಡಲಾಗಿದೆ. ಆದರೆ, ಕೆಲವೇ ಕುಟುಂಬದ ಸದಸ್ಯರು ಶವಸಂಸ್ಕಾರ ನಡೆಸಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆ ನೈರ್ಮಲ್ಯ ಕಾರ್ಮಿಕರು ಇವರ ಸಂಬಂಧಿಗಳಾಗಿ ನಿಲ್ಲುತ್ತಿದ್ದಾರೆ.
ಅಧಿಕೃತ ಅಂಕಿಅಂಶಗಳ ಪ್ರಕಾರ, ಕೊರೊನಾದಿಂದ ಹೆಚ್ಚು ಬಲಿಯಾದ ಇಂದೋರ್‌ನಲ್ಲಿ ಭಾನುವಾರದವರೆಗೆ 1,568 ಪ್ರಕರಣ ಮತ್ತು 76 ಸಾವು ವರದಿಯಾಗಿವೆ. ಹಿಂದೂ, ಮುಸ್ಲಿಂ ಅಥವಾ ಬೇರೆ ಯಾವುದೇ ಧರ್ಮದ ವ್ಯಕ್ತಿಯು ಕೊರೊನಾದಿಂದ ಸಾವನ್ನಪ್ಪಿದರೆ ನಾವು ಯಾವುದೇ ಜಾತಿ, ಧರ್ಮ ನೋಡದೆ ಅಂತಿಮ ವಿದಿವಿಧಾನ ನಡೆಸುತ್ತೇವೆ. ಮೃತರ ಕುಟುಂಬಗಳಿಗೆ ಅಂತಿಮ ವಿದಾಯ ಹೇಳಲು ಸಹಾಯ ಮಾಡುತ್ತಿದ್ದೇವೆ. ಅವರೊಂದಿಗೆ ನಮಗೆ ಯಾವುದೇ ರಕ್ತ ಸಂಬಂಧವಿಲ್ಲ. ಮಾನವೀಯತೆ ದೃಷ್ಟಿಯಿಂದ ಮಾಡುತ್ತಿದ್ದೇವೆ ಎಂದು ನೈರ್ಮಲ್ಯ ಕಾರ್ಮಿಕರ ಮುಖ್ಯಸ್ಥ ಸೋಹನ್ ಲಾಲ್ ಖಟ್ವಾ (50) ತಿಳಿಸಿದ್ದಾರೆ.
ನಾವು ಕೂಡ ಕುಟುಂಬ ಹಾಗೂ ಮಕ್ಕಳನ್ನು ಹೊಂದಿದ್ದೇವೆ. ನಮಗೂ ಕೂಡ ಕೊರೊನಾ ಬಗ್ಗೆ ಭಯ ಇದೆ. ಆದರೆ, ಕೊರೊನಾದಿಂದ ಮೃತರಾದವರ ಅಂತ್ಯಕ್ರಿಯೆ ನೆರವೇರಿಸೋ ಬಗ್ಗೆ ಎಲ್ಲವನ್ನೂ ತಿಳಿದಿದ್ದೇವೆ ಎಂದರು. ವಿಧಿವಿಧಾನ ನೆರವೇರಿಸುವಾಗ ಮೃತ ದೇಹದ ಮೇಲೆ ದೂರದಿಂದಲೇ ರಾಸಾಯನಿಕಗಳನ್ನು ಸಿಂಪಡಣೆ ಮಾಡುತ್ತೇವೆ. ಇದಾದ ನಂತರ ದೇಹವನ್ನು ಪ್ಲಾಸ್ಟಿಕ್ ಕವರ್ ಮತ್ತು ಬಟ್ಟೆಯಿಂದ ಸುತ್ತಿದ ಬಳಿಕ ವಿಶೇಷ ಚೀಲದಲ್ಲಿ ಮುಚ್ಚಲಾಗುತ್ತದೆ ಎಂದು ಮಾಹಿತಿ ನೀಡಿದರು.