ಮುಂಬೈ:ಕಳೆದ ಕೆಲ ದಿನಗಳಿಂದ ಭಾರತೀಯ ಸ್ಮಾರ್ಟ್ಫೋನ್ ಬಳಕೆದಾರರು ಎದುರು ನೋಡುತ್ತಿದ್ದ ಸ್ಯಾಮ್ಸಂಗ್ ಮಡಚುವ(ಫೋಲ್ಡಿಂಗ್ ಫೋನ್) ವಿಶೇಷ ಗ್ಯಾಲಕ್ಸಿ ಫೋನ್ ಕೊನೆಗೂ ಮಾರುಕಟ್ಟೆಗೆ ಲಗ್ಗೆ ಹಾಕಿದೆ.
ಭಾರತದಲ್ಲಿ ಲಾಂಚ್ ಆಯ್ತು ಸ್ಯಾಮ್ಸಂಗ್ ಫೋಲ್ಡಿಂಗ್ ಫೋನ್; ಬೆಲೆ ಎಷ್ಟು? - ಸ್ಮಾರ್ಟ್ಫೋನ್
ಬಹುನೀರಿಕ್ಷಿತ ಸ್ಯಾಮ್ಸಂಗ್ ಕಂಪನಿಯ ಫೋಲ್ಡಿಂಗ್ ಸ್ಮಾರ್ಟ್ಫೋನ್ ಭಾರತದಲ್ಲಿ ಕೊನೆಗೂ ರಿಲೀಸ್ ಆಗಿದ್ದು, ಅಧಿಕೃತ ಬೆಲೆ ಸಹ ಘೋಷಣೆಯಾಗಿದೆ.
ಗ್ರಾಹಕರು 1,64,999 ರೂ ನೀಡಿ ಈ ವಿಶೇಷ ಗ್ಯಾಲಕ್ಸಿ ಫೋನ್ ಖರೀದಿಸಬಹುದು. ಈ ಫೋನ್ ಆಯ್ದ ಮಳಿಗೆ ಹಾಗೂ ಮುಂಗಡ ಬುಕಿಂಗ್ ಮೂಲಕ ಮಾತ್ರ ಖರೀದಿಗೆ ಸಿಗುತ್ತಿದೆ.
ಗ್ಯಾಲಕ್ಸಿ ಫೋಲ್ಡ್ ಫೋನ್ 7.3 ಅಂಗುಲದ ಇನ್ಫಿನಿಟಿ ಫ್ಲೆಕ್ಸ್ ಪರದೆ ಹೊಂದಿದ್ದು, 4.6 ಅಮಲೋಡ್ ಹೊರಾಂಗಣ ಪರದೆ ಇದೆ. ಮುಂಭಾಗದ ಕ್ಯಾಮೆರಾ 10ಎಂಪಿ, ಹಿಂಭಾಗದ ಎರಡೂ ಕ್ಯಾಮೆರಾಗಳು ಕ್ರಮವಾಗಿ 10ಎಂಪಿ ಹಾಗೂ 8ಎಂಪಿ ಸಾಮರ್ಥ್ಯ ಹೊಂದಿವೆ. 3 ಕ್ಯಾಮೆರಾ ಸೆಟಿಂಗ್ಸ್ನಡಿ 12ಎಂಪಿಯ ಮುಖ್ಯ ಕ್ಯಾಮೆರಾ ಜೊತೆಗೆ 16 ಎಂಪಿಯ ವೈಡ್ ಆ್ಯಂಗಲ್ ಕ್ಯಾಮೆರಾ ಮತ್ತು 12ಎಂಪಿಯ ಟೆಲಿಪೋನ್ ಕ್ಯಾಮೆರಾವಿದೆ. 12ಜಿಬಿ RAM ಮತ್ತು 512ಜಿಬಿಯ ಮೆಮೊರಿ ಸಾಮರ್ಥ್ಯವಿದೆ. 4,380mAh ಸಾಮರ್ಥ್ಯದ ಎರಡು ಬ್ಯಾಟರಿ ಒಳಗೊಂಡಿರುವ ಈ ಫೋನ್ ಅನೇಕ ಹೊಸ ಫೀಚರ್ಸ್ ಹೊಂದಿದೆ.