ಸೇಲಂ:ಪ್ರೇಮ ವಿವಾಹ ಮಾಡಿಕೊಂಡಿದ್ದ ಮಗಳ ಮಾನಸಿಕ ಸ್ಥಿತಿ ಸರಿಯಾಗಿ ಇಲ್ಲದ ಸಮಯದಲ್ಲಿ ಆಕೆಯ ತಂದೆ-ತಾಯಿ ಎರಡು ತಿಂಗಳ ಮಗುವನ್ನು ರೂ. 3 ಲಕ್ಷಕ್ಕೆ ಮಾರಿದ್ದ ಘಟನೆ ತಮಿಳುನಾಡಿನಲ್ಲಿ ನಡೆದಿದ್ದು, ಕಡೆಗೂ ಹೆತ್ತತಾಯಿ ತನ್ನ ಕರುಳ ಕುಡಿಯನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾಳೆ.
ತಮಿಳುನಾಡಿನ ನಾಯನಂಪಟ್ಟಿ ನಿವಾಸಿ ಪೊನ್ನುಸ್ವಾಮಿ ಮಗಳು ಮೀನಾ ಅದೇ ಗ್ರಾಮದ ನಿವಾಸಿ ರಾಜಾಲು ಜೊತೆ ಎರಡು ವರ್ಷದ ಹಿಂದೆ ಪ್ರೇಮ ವಿವಾಹವಾಗಿದ್ದರು. ಇವರಿಬ್ಬರು ತಿರ್ಪುರದಲ್ಲಿರುವ ರೆಡಿಮೇಡ್ ಶಾಪ್ನಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.
ವರ್ಷದ ಹಿಂದೆ ಮೀನಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ಬಳಿಕ ಮೀನಾ ಮನೋವ್ಯಾಧಿಯಿಂದ ಬಳಲುತ್ತಿದ್ದು, ಕೊಯಂಬತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವಿಷಯ ತಿಳಿದ ಆಕೆಯ ತಂದೆ-ತಾಯಿ ಮೀನಾಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಆಕೆಗೆ ಚಿಕಿತ್ಸೆ ನಡೆಯುತ್ತಿರುವ ಸಮಯದಲ್ಲಿ ಆಕೆಯ ಎಂಡು ತಿಂಗಳ ಮಗುವನ್ನು ಆಕೆಯ ಪೋಷಕರೇ ಮೂರು ಲಕ್ಷಕ್ಕೆ ಮಾರಿದರು. ಬಳಿಕ ಆಕೆಯ ಗಂಡನನ್ನು ಹೊಡೆದು ಹೊರ ಹಾಕಿದರು.
ಇತ್ತ ಚಿಕಿತ್ಸೆ ಬಳಿಕ ಮನೋವ್ಯಾಧಿ ಮುಕ್ತರಾದ ಮೀನಾ ತನ್ನ ಗಂಡ, ಮಗು ಎಲ್ಲಿದ್ದಾರೆ ಎಂದು ತನ್ನ ಪೋಷಕರಿಗೆ ಕೇಳಿದ್ದಾರೆ. ಆದ್ರೆ ಗಂಡ, ಮಗುವನ್ನು ಮರೆಯುವಂತೆ ಯುವತಿಗೆ ತಂದೆ-ತಾಯಿ ಹೇಳಿದ್ದಾರೆ.
ಬಳಿಕ ಸಂಬಂಧಿಕರ ಸಹಾಯದಿಂದ ಗಂಡನನ್ನು ಭೇಟಿಯಾದ ಮೀನಾ. ಬಳಿಕ ನವೆಂಬರ್ 18ರಂದು ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಮಗನನ್ನು ಹುಡುಕಿಕೊಂಡುವಂತೆ ಬೇಡಿಕೊಂಡು ದೂರು ದಾಖಲಿಸಿದ್ದಾರೆ. ಮೀನಾ ಸಹಾಯಕ್ಕೆ ನಿಂತ ಜಿಲ್ಲಾಧಿಕಾರಿ ವಿಚಾರಣೆ ಕೈಗೊಳ್ಳುವಂತೆ ಆದೇಶಿಸಿದರು. ವಿಚಾರಣೆ ಕೈಗೊಂಡ ಪೊಲೀಸರು ವಿಲ್ಲುಪುರಂ ಜಿಲ್ಲೆಯ ತಿರುವಾವಲೂರಿನ ದಂಪತಿ ಬಳಿ ಮಗು ಇರುವುದನ್ನು ಪತ್ತೆ ಹಚ್ಚಿದ್ದರು. ಬಳಿಕ ಆ ಮಗುವನ್ನು ಚೈಲ್ಡ್ ಹೋಂಗೆ ಕಳುಹಿಸಿದ್ದರು. ನಂತರ ಡಿಎನ್ಎ ಪರೀಕ್ಷೆ ಬಳಿಕ ಮಗುವನ್ನು ಅಸಲಿ ತಂದೆ-ತಾಯಿಗೆ ನೀಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.