ಕರ್ನಾಟಕ

karnataka

ETV Bharat / bharat

ಮತ್ತೆ ರಾಮ ಮಂದಿರ ನಿರ್ಮಾಣ ಕೂಗು: ಅಯೋಧ್ಯೆಯಲ್ಲಿ ಸಾಧು ಸಂತರಿಂದ ಸಭೆ - undefined

ರಾಮ ಮಂದಿರ ನಿರ್ಮಾಣ ಕುರಿತು ಚರ್ಚೆ ನಡೆಸಲು ಇಂದು ದೇಶಾದ್ಯಂತ ಇರುವ ಸಾಧು ತಂತರೆಲ್ಲ ಅಯೋಧ್ಯೆಯ ರಾಮ ಜನ್ಮ ಭೂಮಿಯಲ್ಲಿ ಸಭೆ ಸೇರಲಿದ್ದಾರೆ.

ಅಯೋಧ್ಯೆಯಲ್ಲಿ ಸಾಧು ಸಂತರಿಂದ ಸಭೆ

By

Published : Jun 3, 2019, 8:51 AM IST

ಅಯೋಧ್ಯೆ(ಉತ್ತರ ಪ್ರದೇಶ):ರಾಮ ಮಂದಿರ ನಿರ್ಮಾಣ ಕುರಿತು ಚರ್ಚೆ ನಡೆಸಲು ದೇಶಾದ್ಯಂತ ಇರುವ ಸಾಧು ಸಂತರೆಲ್ಲ ಇಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಸಭೆ ನಡೆಸಲಿದ್ದಾರೆ.

ರಾಮ ಮಂದಿರ ನಿರ್ಮಾಣ ಚಳುವಳಿಯನ್ನ ಪ್ರಾರಂಭಿಸಿದ ರಾಮ ಜನ್ಮಭೂಮಿ ಟ್ರಸ್ಟ್​​ ಮತ್ತು ವಿಶ್ವ ಹಿಂದೂ ಪರಿಷತ್ ಸಹಯೋಗದೊಂದಿಗೆ ಈ ಸಭೆಯನ್ನ ಆಯೋಜನೆ ಮಾಡಲಾಗಿದೆ. ಸಭೆಯಲ್ಲಿ ರಾಮ ಮಂದಿರ ನಿರ್ಮಾಣದ ಕುರಿತು ಚರ್ಚೆ ನಡೆಸಿ ಪ್ರಸ್ತಾವನೆಯನ್ನ ಸಿದ್ಧಪಡಿಸಲಿದ್ದಾರೆ. ರಾಮ ಜನ್ಮಭೂಮಿ ಟ್ರಸ್ಟ್​​ ಮುಖ್ಯಸ್ಥ ಮಹಂತ್ ನೃತ್ಯ ಗೋಪಾಲ್ ದಾಸ್ ಅವರ ಜನ್ಮದಿನದ ಆಚರಣೆ ಜೂನ್ 7ರಿಂದ ಜೂನ್ 15 ವರೆಗೆ ಒಂಭತ್ತು ದಿನಗಳ ಕಾಲ ನಡೆಯಲಿದೆ. ಕೊನೆಯ ದಿನದಂದು ತೆರೆದ ವೇದಿಕೆಗಳಲ್ಲಿ ರಾಮ ಮಂದಿರ ನಿರ್ಮಾಣದ ಬಗ್ಗೆ ಚರ್ಚೆ ಮಾಡಲಾಗುತ್ತದೆ ಎನ್ನಲಾಗಿದೆ.

ಮಹಂತ್ ನೃತ್ಯ ಗೋಪಾಲ್ ದಾಸ್ ಅವರ ಜನ್ಮದಿನ ಕಾರ್ಯಕ್ರಮದ ಮೊದಲ ದಿನ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಪಾಲ್ಗೊಳ್ಳಲಿದ್ದಾರೆ.

For All Latest Updates

TAGGED:

ABOUT THE AUTHOR

...view details