ಕರ್ನಾಟಕ

karnataka

ETV Bharat / bharat

ಸೈನಾ ನೆಹ್ವಾಲ್ ಸೇರ್ಪಡೆ ಮೋದಿ ಅವರ ಜನಪ್ರಿಯತೆ ದ್ಯೋತಕ:  ಬಿಜೆಪಿ ಬಣ್ಣನೆ - ಸೈನಾ ನೆಹ್ವಾಲ್ ಲೆಟೆಸ್ಟ್ ನ್ಯೂಸ್​

ಬಿಜೆಪಿಗೆ ಸೇರ್ಪಡೆಯಾದ ಸೈನಾ ನೆಹ್ವಾಲ್ ಅವರನ್ನು ಪಕ್ಷಕ್ಕೆ ತೆಲಂಗಾಣ ಬಿಜೆಪಿ ಸರ್ಕಾರ ಸ್ವಾಗತಿಸಿದೆ. ಇದೇ ವೇಳೆ ನೆಹ್ವಾಲ್​ ಪಕ್ಷಕ್ಕೆ ಸೇರ್ಪಡೆಗೊಳ್ಳುವುದು ಮೋದಿ ಸರ್ಕಾರದ ಜನಪ್ರಿಯತೆಯನ್ನು ಸೂಚಿಸುತ್ತದೆ ಎಂದು ಬಿಜೆಪಿ ನಾಯಕರು ಬಣ್ಣಿಸಿದ್ದಾರೆ.

BJP
ಬಿಜೆಪಿ

By

Published : Jan 30, 2020, 5:26 PM IST

ಹೈದರಾಬಾದ್ ( ತೆಲಂಗಾಣ) ​: ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್​ ಅವರು ಬಿಜೆಪಿಗೆ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು, ಇದು ಮೋದಿ ಸರ್ಕಾರದ ಜನಪ್ರೀಯತೆಯನ್ನು ತೋರಿಸುತ್ತದೆ. ಇವರ ಉಪಸ್ಥಿತಿಯು ತೆಲಂಗಾಣ ಸೇರಿದಂತೆ ದೇಶದ ಇತರ ಸ್ಥಳಗಳಲ್ಲಿ ಬಿಜೆಪಿಗೆ ಸಹಾಯ ಮಾಡುತ್ತದೆ ಎಂದು ರಾಜ್ಯ ಬಿಜೆಪಿ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ರಾಷ್ಟ್ರ ಬಿಜೆಪಿ ಅಧ್ಯಕ್ಷ ಕೆ.ಲಕ್ಷಣ್​ ಅವರು ಮಾತನಾಡಿ, ಸೈನಾ ನೆಹ್ವಾಲ್​ ಅವರಂತಹ ಸೆಲೆಬ್ರಿಟಿಗಳು ಪಕ್ಷಕ್ಕೆ ಸೇರ್ಪಡೆಯಾಗಿರುವುದು ಮೋದಿಯವರ ವರ್ಚಸ್ಸನ್ನು ತೋರಿಸುತ್ತದೆ. ಇದರ ಜೊತೆಗೆ ಬಿಜೆಪಿ ಸರ್ಕಾರದ ಕಾರ್ಯಕ್ಷಮತೆ ಸೇರಿದಂತೆ ಇಡೀ ದೇಶಾದ್ಯಂತ ಜನರು ಬಿಜೆಪಿ ಸರ್ಕಾರವನ್ನು ಇಷ್ಟ ಪಡುತ್ತಿದ್ದಾರೆ ಎಂಬುದನ್ನು ತೋರಿಸುತ್ತಿದೆ.

ಇನ್ನು ನಮ್ಮ ಪಕ್ಷಕ್ಕೆ ಸೇರ್ಪಡೆಯಾಗಿರುವ ಸೈನಾ ನೆಹ್ವಾಲ್​​ರವರಿಗೆ ನಾನು ಸ್ವಾಗತವನ್ನು ಕೋರುತ್ತೇನೆ. ಇನ್ನುಂದೆ ಇವರು ಹೈದರಾಬಾದ್​ ಬಿಜೆಪಿ ಸರ್ಕಾರದ ಒಂದು ಭಾಗವಾಗಿದ್ದಾರೆ. ಇದು ನಮಗೆ ಸಹಾಯ ಮಾಡುತ್ತದೆ ಎಂದರು.

ಬಳಿಕ ಬಿಜೆಪಿ ಎಂಎಲ್‌ಸಿ ಮತ್ತು ಪಕ್ಷದ ಹೈದರಾಬಾದ್ ಘಟಕದ ಅಧ್ಯಕ್ಷ ಎನ್. ರಾಮಚಂದರ್ ರಾವ್ ಮಾತನಾಡಿ, ಸೈನಾ ನೆಹ್ವಾಲ್​ಗೆ ಪಕ್ಷ ಸೂಕ್ತ ಸ್ಥಾನವನ್ನು ನೀಡುತ್ತದೆ. ಪಕ್ಷ ನೀಡುವ ಯಾವುದೇ ಹುದ್ದೆಯಲ್ಲಿ ಇದ್ದುಕೊಂಡು ಕೆಲಸ ಮಾಡಲು ಸಹ ಆಸಕ್ತಿ ಹೊಂದಿದ್ದಾರೆ. ಖಂಡಿತವಾಗಿಯೂ ಆಕೆಯ ಪಾತ್ರವು ಬಿಜೆಪಿಯನ್ನು ಅವರು ಕೆಲಸ ಮಾಡುವಾಗಲೆಲ್ಲ ಬಲಪಡಿಸುತ್ತದೆ. ತೆಲಂಗಾಣ ಪಕ್ಷವು ಅವರ ಸೇವೆಯನ್ನು ಬಳಸಿಕೊಳ್ಳುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಷ್ಟ್ರ ರಾಜಧಾನಿಯಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಅವರು ಪ್ರಚಾರ ನಡೆಸುತ್ತಾರೆಯೇ ಎಂದು ಕೇಳಿದಾಗ, ಬಹುಶಃ ದೆಹಲಿ ಚುನಾವಣೆಯಲ್ಲಿ ಅನೇಕ ತಂಡಗಳು ಕಾರ್ಯನಿರ್ವಹಿಸುತ್ತಿವೆ ಮತ್ತು ಆಕೆ ಸಹ ಕೆಲಸ ಮಾಡುವ ಸಾಧ್ಯತೆಯಿದೆ ಎಂದರು.

ABOUT THE AUTHOR

...view details