ತೆಹ್ರಿ,(ಉತ್ತರಾಖಂಡ) :ಕಠಿಣ ಪರಿಶ್ರಮ ಮತ್ತು ದೃಢ ಸಂಕಲ್ಪದಿಂದ ಅಸಾಧ್ಯಗಳನ್ನು ಸಾಧ್ಯವಾಗಿಸಬಹುದು ಎಂದು ತೆಹ್ರಿ ಜಿಲ್ಲೆಯ ಚಂಬಾ ಬ್ಲಾಕ್‌ನ ನಿವಾಸಿ ವಿಜಯ್ ರಾಮ್ ಸೆಮ್ಲಾತಿ ತೋರಿಸಿಕೊಟ್ಟಿದ್ದಾರೆ. ಇವರು ತಮ್ಮ ಹೊಲಗಳಲ್ಲಿ ಕೇವಲ ಕಾಶ್ಮೀರದಲ್ಲಿ ಮಾತ್ರ ಬೆಳೆಯಲಾಗುತ್ತಿದ್ದ ಕೇಸರಿಯನ್ನು ಬೆಳೆದು ಅಚ್ಚರಿ ಮೂಡಿಸಿದ್ದಾರೆ.
ಕೇಸರಿ(Saffron) ಅತ್ಯಂತ ದುಬಾರಿ ಮಸಾಲೆಗಳಲ್ಲಿ ಒಂದು. ವಿಜಯ್ ತಮ್ಮ ಕಠಿಣ ಪರಿಶ್ರಮದಿಂದಾಗಿ ಉತ್ತರಾಖಂಡದಲ್ಲಿ ಇದನ್ನು ಬೆಳೆದಿದ್ದಾರೆ. ಸದ್ಯ ವಿಜಯ್ ವಾಸವಿರುವ ಉತ್ತರಾಖಂಡ ರಾಜ್ಯದಲ್ಲಿರುವ ಪ್ರದೇಶದ ಹವಾಮಾನ ಪರಿಸ್ಥಿತಿಯು ಕೇಸರಿ ಕೃಷಿಗೆ ಅನುಕೂಲಕರವೆಂದು ಪರಿಗಣಿಸಲಾಗಿದೆ. ತಮ್ಮ ಕ್ಷೇತ್ರದಲ್ಲಿ ಒಂದು ಸಣ್ಣ ಪ್ರದೇಶದಲ್ಲಿ ಕುಂಕುಮ ಕೇಸರಿ ಬೆಳೆಸಲಾಗಿದ್ದು, ಉತ್ತಮ ಫಲಿತಾಂಶ ಲಭಿಸಿದೆ. ಹೀಗಾಗಿ ವಿಜಯ್ ಭವಿಷ್ಯದಲ್ಲಿ ತಮ್ಮ ಹೊಲಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಕೇಸರಿ ಬೆಳೆಯಲು ಯೋಜಿಸುತ್ತಿದ್ದಾರೆ. ಇದು ಅನೇಕ ಜನರಿಗೆ ಉದ್ಯೋಗವನ್ನೂ ಒದಗಿಸಬಹುದು ಎಂದು ವಿಜಯ್ ಅಭಿಪ್ರಾಯಪಟ್ಟಿದ್ದಾರೆ.