ಕೊಯಂಬತ್ತೂರ್ (ತಮಿಳುನಾಡು):ಇಶಾ ಫೌಂಡೇಶನ್ ಸಂಸ್ಥಾಪಕ ಸದ್ಗುರು ಅವರ ಚಿತ್ರಕಲೆಯೂ ದಾಖಲೆ ಬೆಲೆಗೆ ಮಾರಾಟವಾಗಿದೆ. 5x5 ಅಡಿ ಅಳತೆಯ ಅಮೂರ್ತ ಕಲ್ಪನೆಯ ಚಿತ್ರಕ್ಕೆ 4.14 ಕೋಟಿ ರೂಪಾಯಿ ಸಿಕ್ಕಿದೆ. ಈ ಚಿತ್ರಕಲೆಯನ್ನು ಸೇಲ್ ಮಾಡಿ ಬಂದ ಹಣವನ್ನು ಕೊರೊನಾ ನಿಧಿಗೆ ನೀಡುವುದಾಗಿ ಸದ್ಗುರು ಘೋಷಿಸಿದ್ದರು.
ಸದ್ಗುರು ಚಿತ್ರಿಸಿದ್ದ ಚಿತ್ರದಿಂದ ಸಂಗ್ರಹಿಸಿದ ಹಣವನ್ನು ತಮಿಳುನಾಡಿನ ಗ್ರಾಮೀಣ ಭಾಗದ ಇಶಾ ಫೌಂಡೇಶನ್ ಯೋಗ ಕೇಂದ್ರದ ಸುತ್ತಮುತ್ತ ಕೊರೊನಾ ವಿರುದ್ಧದ ಹೋರಾಟಕ್ಕೆ ಬಳಸಲು ನಿರ್ಧರಿಸಲಾಗಿದೆ.