ನವದೆಹಲಿ: ಕೇರಳದ ಕೋಯಿಕೋಡ್ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ವಿಮಾನ ದುರಂತದ ಬಗ್ಗೆ ದೇಶ- ವಿದೇಶಗಳಿಂದ ಸಂತಾಪ ಸಂದೇಶಗಳು ಹರಿದುಬರುತ್ತಿವೆ.
ಕೇರಳ ರಾಜ್ಯದಲ್ಲಿ ಏರ್ ಇಂಡಿಯಾ ವಿಮಾನ ಅಪಘಾತದ ಬಗ್ಗೆ ತಿಳಿದು ಬೇಸರಗೊಂಡಿದ್ದೇನೆ. ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ದುಃಖಿತ ಕುಟುಂಬಗಳಿಗೆ ಅವರ ಕಷ್ಟದ ಸಮಯದಲ್ಲಿ ಅಲ್ಲಾಹು ಶಕ್ತಿ ನೀಡಲಿ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಪ್ರಾರ್ಥಿಸಿದ್ದಾರೆ.
ಕೇರಳ ರಾಜ್ಯದಲ್ಲಿ ಏರ್ ಇಂಡಿಯಾ ವಿಮಾನ ಅಪಘಾತವು ಮುಗ್ಧ ಜೀವಗಳನ್ನು ಕಳೆದುಕೊಳ್ಳಲು ಕಾರಣವಾಗಿದೆ. ದುಃಖಿತ ಕುಟುಂಬಗಳಿಗೆ ಅವರ ಕಷ್ಟದ ಸಮಯದಲ್ಲಿ ಅಲ್ಲಾಹು ಶಕ್ತಿಯನ್ನು ನೀಡಲಿ ಎಂದು ಸಂತಾಪ ಸಂದೇಶ ಟ್ವೀಟ್ ಮಾಡಿದ್ದಾರೆ.
ಕೇರಳದಲ್ಲಿ ವಿಮಾನ ಅಪಘಾತದಿಂದ ಹಾನಿಗೊಳಗಾದವರಿಗೆ ನಮ್ಮ ಹೃದಯ ಮಿಡಿಯುತ್ತಿದೆ. ನಾವು ಮೃತರ ಕುಟುಂಬ ಮತ್ತು ಸ್ನೇಹಿತರೊಂದಿಗೆ ದುಃಖಿತರಾಗಿದ್ದೇವೆ. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ಬಯಸುತ್ತೇವೆ ಎಂದು ಅಮೆರಿಕದ ಸಂತಾಪ ಸಂದೇಶ ತಿಳಿಸಿದೆ.