ಅಮೃತಸರ (ಪಂಜಾಬ್): ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪಂಜಾಬ್ನ ವಿವಿಧ ಪ್ರದೇಶಗಳಲ್ಲಿ ಶಿರೋಮಣಿ ಅಕಾಲಿ ದಳದ (SAD) ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ.
ಕೃಷಿ ಕಾಯ್ದೆ ವಿರೋಧಿಸಿ ಪಂಜಾಬ್ನಲ್ಲಿ ಅಕಾಲಿ ದಳದಿಂದ 'ಕಿಸಾನ್ ಯಾತ್ರೆ' - ಕಿಸಾನ್ ಯಾತ್ರೆ
ಶಿರೋಮಣಿ ಅಕಾಲಿ ದಳದ ನಾಯಕರು ಪಂಜಾಬ್ನ ವಿವಿಧ ಪ್ರದೇಶಗಳಲ್ಲಿ ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದು, ಕಾಯ್ದೆಗಳನ್ನು ರದ್ದುಪಡಿಸುವಂತೆ ಕೋರಿ ಪಕ್ಷವು ಪಂಜಾಬ್ ರಾಜ್ಯಪಾಲರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಿದೆ.

ಅಕಾಲಿ ದಳದಿಂದ 'ಕಿಸಾನ್ ಯಾತ್ರೆ'
ಅಕಾಲಿ ದಳದ ಮುಖಂಡ ಸುಖ್ಬೀರ್ ಸಿಂಗ್ ಬಾದಲ್ ನೇತೃತ್ವದಲ್ಲಿ ಅಮೃತಸರದ ಅಕಾಲ್ ತಖ್ತ್‌ನಲ್ಲಿರುವ ಗೋಲ್ಡನ್ ಟೆಂಪಲ್ ಬಳಿ 'ಕಿಸಾನ್ ಯಾತ್ರೆ' ಕೈಗೊಳ್ಳಲಾಗಿದೆ. ಕೇಂದ್ರ ಮಾಜಿ ಸಚಿವೆ ಹರ್ಸಿಮ್ರತ್ ಕೌರ್ ಬಾದಲ್ ನೇತೃತ್ವದಲ್ಲಿ ತಲ್ವಾಂಡಿ ಸಾಬೊದ ದಮದಾ ಸಾಹಿಬ್ ಪ್ರದೇಶದಲ್ಲಿ ಪ್ರತಿಭಟನೆ ನಡೆಯುತ್ತಿದೆ.
ಕೃಷಿ ಕಾಯ್ದೆ ವಿರೋಧಿಸಿ ಪಂಜಾಬ್ನಲ್ಲಿ ಅಕಾಲಿ ದಳದಿಂದ 'ಕಿಸಾನ್ ಯಾತ್ರೆ'
ಸಂಸತ್ನಲ್ಲಿ ಇತ್ತೀಚೆಗೆ ಅಂಗೀಕರಿಸಿದ ಕೃಷಿ ಕಾಯ್ದೆಗಳನ್ನು ರದ್ದುಪಡಿಸುವಂತೆ ಕೋರಿ ಪಕ್ಷವು ಜ್ಞಾಪಕ ಪತ್ರವನ್ನು ಪಂಜಾಬ್ ರಾಜ್ಯಪಾಲರ ಮೂಲಕ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಿದೆ.
Last Updated : Oct 1, 2020, 2:29 PM IST