ನವದೆಹಲಿ: ಕ್ರಿಕೆಟ್ ಗಾಡ್ ಸಚಿನ್ ತೆಂಡೂಲ್ಕರ್ ಬುಧವಾರ 46ನೇ ಜನ್ಮದಿನದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಅವರ ಬರ್ತ್ಡೇ ಪ್ರಯುಕ್ತ ದೇಶದಾದ್ಯಂತ ಅಭಿಮಾನಿಗಳು ಶುಭಾಶಯಗಳ ಸುರಿಮಳೆಗರೆದಿದ್ದಾರೆ. ಇತ್ತ ಸಚಿನ್ ಗೆಳಯ ವಿನೋದ್ ಕಾಂಬ್ಳಿ ಟ್ವಿಟ್ಟರ್ನಲ್ಲಿ ತನ್ನ ಗೆಳೆಯನಿಗೆ ಸ್ಪೆಷಲ್ ಆಗಿ ವಿಶ್ ಮಾಡಿದ್ದಾರೆ. ಇನ್ನೂ ಅದಕ್ಕೆ ಟ್ವಿಟ್ಟರ್ನಲ್ಲಿ ಸಚಿನ್ ಫ್ಯಾನ್ಸ್ ಕಾಮೆಂಟ್ಗಳ ರೀಕಾಮೆಂಟ್ಗಳ ಮಹಾಪೋರವನ್ನೆ ಹರಿಸುತ್ತಿದ್ದಾರೆ.
ತೆಂಡುಲ್ಕರ್ ಬರ್ತ್ಡೇಗೆ ಹಾಡಿನ ಮೂಲಕ ವಿಭಿನ್ನವಾಗಿ ವಿಷ್ ಮಾಡಿದ ಕಾಂಬ್ಳಿ ಹೌದು, ತನ್ನ ಬಾಲ್ಯದ ಗೆಳೆಯ, ಕ್ರಿಕೆಟ್ ಪಾರ್ಟ್ನರ್ ಬರ್ತ್ಡೇಗೆ ಕಾಂಬ್ಳಿ ಹಳೆಯ ಸ್ನೇಹವನ್ನು ನೆನಪಿಸುವ ಬಾಲಿವುಡ್ನ ಹಳೆಯ ಹಾಡನ್ನು ಹಾಡಿ, ಕೊನೆಗೆ ಹ್ಯಾಪಿ ಬರ್ತ್ಡೇ ಮಾಸ್ಟರ್ ಬ್ಲಾಸ್ಟರ್ ಎಂದು ಹೇಳಿ ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದ್ದಾನೆ.
ಮರುದಿನ ಈ ಪೋಸ್ಟ್ ನೋಡಿದ ತೆಂಡೂಲ್ಕರ್, " ಹಾಡೇನೋ ಅದ್ಭುತವಾಗೇ ಇದೆ ಆದ್ರೆ, ನಿನ್ನ ಹುಬ್ಬುಗಳೆರಡು ಕಪ್ಪೇ ಇದ್ದು, ಆ ಗಡ್ಡ ಮಾತ್ರ ಬಿಳಿಯಾಗಿರೋದು ಯಾಕೆ ಅಂತಾ ಆಶ್ಚರ್ಯವಾಗ್ತಿದೆ" ಎಂದು ತಮಾಷೆ ಮಾಡಿ ಕಾಮೆಂಟ್ ಮಾಡಿದ್ದಾರೆ.
ಇನ್ನೂ ಈ ಪೋಸ್ಟ್ ನೋಡಿದ ಸಚಿನ್ ಅಭಿಮಾನಿಗಳು ಕಾಂಬ್ಳಿ ಹಾಡಿಗೆ ಶಭಾಷ್ಗಿರಿ ನೀಡಿದ್ದಾರೆ. ಅಷ್ಟೇ ಅಲ್ಲದೆ, ಸಚಿನ್ ಹಾಗೂ ಕಾಂಬ್ಳಿ ಕ್ರಿಕೆಟ್ ಶಿಖರ ಏರಲು ಪ್ರಾರಂಭಿಸಿದಾಗ ಜೊತೆಯಲ್ಲಿ ತೆಗೆಸಿದ್ದ ಹಳೆಯ ಫೋಟೋಗಳನ್ನ ಹಾಗೂ ಕಾಂಬ್ಳಿ ಪೋಸ್ಟ್ಗೆ ಸಚಿನ್ ಮಾಡಿರುವ ರಿಪೈ ಶೇರ್ ಮಾಡಿದ್ದಾರೆ.
ಸಚಿನ್ ಹಾಗೂ ಕಾಂಬ್ಳಿ ತೆಗೆಸಿದ್ದ ಹಳೆಯ ಫೋಟೋ ಅಷ್ಟೇ ಅಲ್ಲದೆ, ಸರ್ ಇದು ಡಿಜಿಟಲ್ ಯುಗ, ಈಗ ಏನುಬೇಕಾದರೂ ಆಗಬಹುದು. ಹಾಗೆಯೇ ಕಾಂಬ್ಳಿ ಹೊಸ ಲುಕ್ ಅಡಾಪ್ಟ್ ಮಾಡಿಕೊಂಡಿದ್ದಾರೆ. ಎಂದು ಸಚಿನ್ ಕಾಮೆಂಟ್ಗೆ ರೀಕಾಮೇಂಟ್ ಮಾಡಿದ್ದಾರೆ.