ಮುಂಬೈ( ಮಹಾರಾಷ್ಟ್ರ): ಗಾಲ್ವಾನ್ ಸಂಘರ್ಷದಲ್ಲಿ ಗಾಯಗೊಂಡಿದ್ದ ಮಹಾರಾಷ್ಟ್ರದ ನಾಸಿಕ್ ಮೂಲದ ಯೋಧ ಸಚಿನ್ ಮೋರ್ ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದಾರೆ.
ಗಾಲ್ವಾನ್ ಸಂಘರ್ಷದಲ್ಲಿ ಗಾಯಗೊಂಡಿದ್ದ ಯೋಧ ಹುತಾತ್ಮ - ಪೂರ್ವ ಲಡಾಖ್ನ ಗಾಲ್ವಾನ್ ಕಣಿವೆ
ಪೂರ್ವ ಲಡಾಖ್ನ ಗಾಲ್ವಾನ್ ಕಣಿವೆಯಲ್ಲಿ ಭಾರತ - ಚೀನಾ ಸೈನಿಕರ ನಡುವೆ ನಡೆದಿದ್ದ ಸಂಘರ್ಷದ ವೇಳೆ ಗಾಯಗೊಂಡಿದ್ದ ಯೋಧನೊಬ್ಬ ಹುತಾತ್ಮನಾಗಿದ್ದಾರೆ.
ಹುತಾತ್ಮ ಯೋಧ ಸಚಿನ್ ಮೋರ್
ಜೂನ್ 15 ರಂದು ಪೂರ್ವ ಲಡಾಖ್ನ ಗಾಲ್ವಾನ್ ಕಣಿವೆಯಲ್ಲಿ ಭಾರತ - ಚೀನಾ ಸೈನಿಕರ ನಡುವೆ ನಡೆದಿದ್ದ ಸಂಘರ್ಷದ ವೇಳೆ ಇಬ್ಬರು ಭಾರತೀಯ ಯೋಧರು ನದಿಯಲ್ಲಿ ಬಿದ್ದಿದ್ದರು. ಇವರನ್ನು ರಕ್ಷಿಸುವ ವೇಳೆ ಸಚಿನ್ ಮೋರ್ ಗಂಭೀರವಾಗಿ ಗಾಯಗೊಂಡಿದ್ದರು. ಘಟನೆ ಬಳಿಕ ಇವರನ್ನು ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಸಚಿನ್ ಮೋರ್ ಅವರಿಗೆ ಪತ್ನಿ, ಇಬ್ಬರು ಹೆಣ್ಣುಮಕ್ಕಳು ಮತ್ತು ಪೋಷಕರು ಇದ್ದಾರೆ. ಇವರ ನಿಧನದ ಮೂಲಕ ಗಾಲ್ವಾನ್ ಸಂಘರ್ಷದಲ್ಲಿ ಒಟ್ಟು 21 ಯೋಧರು ಹುತಾತ್ಮರಾದಂತಾಗಿದೆ.