ಪಥನಮತ್ತಟ್ಟ :ಅಯ್ಯಪ್ಪ ಸ್ವಾಮಿಯ ವಾರ್ಷಿಕ ಮಂಡಲ ಪೂಜೆಗೆ ಶಬರಿಮಲೆಯಲ್ಲಿ ಸಿದ್ಧತೆಗಳು ನಡೆದಿದ್ದು, ಇಂದು ಬೆಳಗ್ಗೆ 11:40ರಿಂದ ಮಧ್ಯಾಹ್ನ 12.20ಕ್ಕೆ ಪೂಜೆ ನಡೆಯಲಿದೆ. ಅಯ್ಯಪ್ಪ ಸ್ವಾಮಿಗೆ ತೊಡಿಸುವ ಚಿನ್ನದ ಅಂಗಿಯ ಮೆರವಣಿಗೆ ಶುಕ್ರವಾರ ಶಬರಿಮಲೆಗೆ ತಲುಪಲಿದೆ. ಅಲ್ಲಿಂದ ಸನ್ನಿಧಾನಕ್ಕೆ ಅದನ್ನು ಕೊಂಡೊಯ್ದ ಬಳಿಕ ಮಂಡಲ ಪೂಜೆ ಆರಂಭವಾಗಲಿದೆ. ಅದಕ್ಕೆ ಅಗತ್ಯವಾದ ಎಲ್ಲಾ ತಯಾರಿಗಳು ಪೂರ್ಣಗೊಂಡಿದೆ.
42 ದಿನಗಳ ವ್ರತದ ಬಳಿಕ ಶಬರಿಮಲೆ ದೇವಸ್ಥಾನವು ಮಂಡಲ ಪೂಜೆಗೆ ಸಜ್ಜುಗೊಂಡಿದೆ. ಆಚರಣೆಗಳಿಗೆ ಅನುಗುಣವಾಗಿ ಅರಣ್ಮುಲ ಪಾರ್ಥ ಸಾರಥಿ ದೇವಸ್ಥಾನದಿಂದ ಹೊರಟ ಥಂಕ ಅಂಕಿ ರಥಯಾತ್ರೆಯು ಪಂಬಾಕ್ಕೆ ಮಧ್ಯಾಹ್ನ ತಲುಪಲಿದೆ.
ಅಲ್ಲಿ ಸ್ವಲ್ಪ ಸಮಯದವರೆಗೆ ವಿಶ್ರಾಂತಿ ಪಡೆದ ನಂತರ ಮೆರವಣಿಗೆ ಮಧ್ಯಾಹ್ನ 3 ಗಂಟೆ ಸುಮಾರಿಗೆ ಮೆರವಣಿಗೆಯು ಸನ್ನಿಧನಕ್ಕೆ ಚಾರಣವನ್ನು ಪ್ರಾರಂಭಿಸಿತು. ಸಂಜೆ 5.15ಕ್ಕೆ ತಿರುವಾಂಕೂರು ದೇವಸ್ವಂ ಮಂಡಳಿಯ ಸದಸ್ಯರ ನೇತೃತ್ವದ ಗುಂಪು ಶರಂ ಕುತಿಯಲ್ಲಿ ನಡೆದ ಮೆರವಣಿಗೆಯನ್ನು ವಿಧ್ಯುಕ್ತವಾಗಿ ಸ್ವಾಗತಿಸಿ ದೇವಾಲಯಕ್ಕೆ ಕರೆದೊಯ್ದಿತು.