ಕರ್ನಾಟಕ

karnataka

ETV Bharat / bharat

ಅಯ್ಯಪ್ಪನ ದರ್ಶನಕ್ಕೆ ಅನುವು: ಸನ್ನಿಧಾನದ ಕಡೆ ಹೊರಟ ಭಕ್ತರು - ಮಕರವಿಲಕ್ಕು ತೀರ್ಥಯಾತ್ರೆ

ಕೊರೊನಾ ಹಿನ್ನೆಲೆ ಕೇರಳದ ಪಥನಮತ್ತಟ್ಟ ಜಿಲ್ಲೆಯ ಶಬರಿಮಲೆ ದೇವಸ್ಥಾನವು ಈ ಬಾರಿ ಕೇವಲ 5,000 ಯಾತ್ರಾರ್ಥಿಗಳಿಗೆ ಮಾತ್ರ ದೇವರ ದರ್ಶನಕ್ಕೆ ಅನುಮತಿ ನೀಡಿದ್ದು, ದೇವರ ದರ್ಶನಕ್ಕೆ ಹೋಗುವವರು ಕಡ್ಡಾಯವಾಗಿ ಕೋವಿಡ್​ ಮಾರ್ಗಸೂಚಿ ಪಾಲಿಸಬೇಕಾಗಿದೆ.

Sabarimala
ಶಬರಿ ಮಲೆ

By

Published : Jan 1, 2021, 8:11 AM IST

ಪಥನಮತ್ತಟ್ಟ: ಕೇರಳದ ಪಥನಮತ್ತಟ್ಟ ಜಿಲ್ಲೆಯ ಶಬರಿಮಲೆ ದೇವಸ್ಥಾನವು ಅಯ್ಯಪ್ಪನ ದರ್ಶನಕ್ಕೆ ಅನುವು ಮಾಡಿಕೊಟ್ಟಿದ್ದು, ದರ್ಶನಕ್ಕಾಗಿ ಯಾತ್ರಿಕರು ಡಿಸೆಂಬರ್ 31ರ ಬೆಳಗ್ಗೆಯಿಂದ ಸನ್ನಿಧಾನ ತಲುಪಲು ಪ್ರಾರಂಭಿಸಿದ್ದಾರೆ.

ಶಬರಿ ಮಲೆಯತ್ತ ಮುಖ ಮಾಡಿದ ಯಾತ್ರಿಗಳು

ಮಕರವಿಲಕ್ಕು ತೀರ್ಥಯಾತ್ರೆಗಾಗಿ ಡಿಸೆಂಬರ್ 30 ರಂದು ಸಂಜೆ ದೇವಾಲಯ ನಾಡಾವನ್ನು ತೆರೆಯಲಾಗಿದ್ದರೂ, ಯಾತ್ರಿಕರನ್ನು ಡಿಸೆಂಬರ್ 31 ರ ಬೆಳಗ್ಗೆಯಿಂದ ಮಾತ್ರ ಒಳಗೆ ಬಿಡಲಾಯಿತು. ಸಾಮಾನ್ಯವಾಗಿ, ಹೊಸ ವರ್ಷದ ದಿನದಂದು, ಪ್ರತಿವರ್ಷ ಅಯ್ಯಪ್ಪ ದರ್ಶನ ಪಡೆಯಲು ಭಾರಿ ಜನಸಂದಣಿ ಇರುತ್ತಿತ್ತು. ಆದಾಗ್ಯೂ, ಈ ಸಮಯದಲ್ಲಿ, ಕಟ್ಟುನಿಟ್ಟಾದ ಕೋವಿಡ್​ ನಿಯಮಗಳ ಮಧ್ಯೆ, ದೇವಾಲಯದ ಒಳಗೆ ದಿನಕ್ಕೆ 5,000 ಯಾತ್ರಾರ್ಥಿಗಳಿಗೆ ಮಾತ್ರ ದರ್ಶನಕ್ಕಾಗಿ ಅನುಮತಿ ನೀಡಲಾಗಿದೆ.

ವರ್ಚುಯಲ್ ಕ್ಯೂ ವ್ಯವಸ್ಥೆಯಲ್ಲಿ ತಮ್ಮ ಸ್ಲಾಟ್‌ಗಳನ್ನು ಮುಂಚಿತವಾಗಿ ಕಾಯ್ದಿರಿಸಿದ ಯಾತ್ರಾರ್ಥಿಗಳಿಗೆ ಆವರಣಕ್ಕೆ ಪ್ರವೇಶಿಸಲು ಮಾತ್ರ ಅವಕಾಶವಿರುತ್ತದೆ. ಅಲ್ಲದೇ ಕೋವಿಡ್​ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗುತ್ತಿದ್ದು, ವಲಿಯಾ ನಾಡಪಾಂಡಲ್‌ನಲ್ಲಿ ಯಾತ್ರಿಕರಿಗೆ ಥರ್ಮಲ್ ಸ್ಕ್ಯಾನ್​ ಮಾಡಿ ಬಿಡಲಾಗುತ್ತಿದೆ.

ದರ್ಶನ ಪಡೆದ ಯಾತ್ರಾರ್ಥಿಗಳಿಗೆ ಸನ್ನಿಧಾನದಲ್ಲಿ ಹಿಂತಿರುಗಲು ಅವಕಾಶವಿರುವುದಿಲ್ಲ. ಅವರು ಪಂಬಾಗೆ ಚಾರಣ ಮಾಡಿ ತಕ್ಷಣ ಹೊರಡಬೇಕಾಗಿತ್ತು. ಮಕರವಿಲಕ್ಕು ತೀರ್ಥಯಾತ್ರೆಯ ನಂತರ ದೇವಾಲಯ ನಾಡಾ ಜನವರಿ 20 ರಂದು ಮುಚ್ಚಲಿದೆ. ಯಾತ್ರಾರ್ಥಿಗಳಿಗೆ ಜನವರಿ 19 ರವರೆಗೆ ದರ್ಶನ ಪಡೆಯಲು ಅನುಮತಿ ನೀಡಲಾಗಿದೆ. ದೇವಾಲಯದ ಆವರಣಕ್ಕೆ ಪ್ರವೇಶಿಸಲು ಕೋವಿಡ್​ ನೆಗೆಟಿವ್​ ವರದಿ ಪ್ರಮಾಣಪತ್ರವನ್ನು ಕಡ್ಡಾಯಗೊಳಿಸಲಾಗಿದೆ.

ABOUT THE AUTHOR

...view details