ಕರ್ನಾಟಕ

karnataka

ಶಬರಿಮಲೆ ಅಯ್ಯಪ್ಪನಿಗೆ ಮಂಡಲ ಪೂಜೆ; ಕೋವಿಡ್​ ನಿಯಮಾನುಸಾರ ದೇವರ ದರ್ಶನ

By

Published : Nov 21, 2020, 5:12 PM IST

ಶಬರಿಮಲೆ ಅಯ್ಯಪ್ಪನ ಸನ್ನಿಧಾನದಲ್ಲಿ ವಾರ್ಷಿಕ ಮಂಡಲ ಪೂಜೆ ನೆರವೇರಿದೆ. ಅಪಾರ ಸಂಖ್ಯೆಯಲ್ಲಿ ನೆರೆಯುವ ಭಕ್ತರಿಗೆ ಈ ಬಾರಿ ಕೊರೊನಾ ತಡೆಹಿಡಿದಿದೆ. ಆದ್ರೂ ಕೋವಿಡ್​ ಮಾರ್ಗಸೂಚಿಯನುಸಾರ ಭಕ್ತರು ಸ್ವಾಮಿ ದರ್ಶನದಲ್ಲಿ ಪಾಲ್ಗೊಂಡಿದ್ದರು.

sabarimala
sabarimala

ಶಬರಿಮಲೆ (ಕೇರಳ):ಭಗವಾನ್​ ಅಯ್ಯಪ್ಪನಿಗೆ ಶುಕ್ರವಾರ ಮುಂಜಾನೆ ವಾರ್ಷಿಕ ಮಂಡಲ ಪೂಜೆ ನೆರವೇರಿದೆ. ಕೋವಿಡ್​ ಪ್ರೊಟೋಕಾಲ್​ಗೆ ಅನುಸಾರವಾಗಿ ಭಕ್ತರು ಇಂದು ಸ್ವಾಮಿ ದರ್ಶನ ಪಡೆದರು.

ಮಂಡಲ ಪೂಜೆಯು ಶಬರಿಮಲೆಯ ವಾರ್ಷಿಕ ಆಚರಣೆಯಾಗಿದ್ದು, ಅಯ್ಯಪ್ಪ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಈ ಪೂಜೆಯಲ್ಲಿ ಪಾಲ್ಗೊಳ್ಳುವುದು ವಾಡಿಕೆ.

ಇನ್ನು ಕೋವಿಡ್​ಗೆ ಸಂಬಂಧಿಸಿದ ಎಲ್ಲಾ ಸೂಚನೆಗಳನ್ನು ದೇವಸ್ಥಾನದ ಆವರಣದೊಳಗೆ ಕಡ್ಡಾಯವಾಗಿ ಪಾಲನೆ ಮಾಡಬೇಕಾಗುತ್ತದೆ. ಸಾಮಾಜಿಕ ಅಂತರವನ್ನು ಕಾಪಾಡುವುದು, ಹಾಗೂ ಮಾಸ್ಕ್​ಗಳನ್ನು ಧರಿಸುವುದು ಪ್ರತಿಯೊಬ್ಬ ಭಕ್ತರಿಗೂ ಕಡ್ಡಾಯವಾಗಿದೆ. ಕೋವಿಡ್​ ಕಾರಣದಿಂದಾಗಿ ಈ ವರ್ಷ ಭಕ್ತ ಸಂಖ್ಯೆಯಲ್ಲೂ ತೀರಾ ಇಳಿಮುಖವಾಗಿದ್ದು, ಹಿಂದಿನ ವರ್ಷಗಳಿಗೆ ಹೋಲಿಸಿದರೆ ದೇವಾಲಯದ ಆವರಣ ತೀರಾ ಖಾಲಿಯಾಗಿ ಕಾಣುತ್ತಿತ್ತು.

ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರು ಕಡ್ಡಾಯವಾಗಿ ಕೋವಿಡ್ ನೆಗೆಟಿವ್ ವರದಿಯನ್ನು ಹೊಂದಿರಬೇಕು. ದಿನಕ್ಕೆ 250 ಜನರಿಗೆ ಮಾತ್ರ ದೇವರ ದರ್ಶನ (ಭೇಟಿ) ನೀಡಲು ಅವಕಾಶ ನೀಡಲಾಗುವುದು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೂಚನೆ ನೀಡಿದ್ದಾರೆ.

ABOUT THE AUTHOR

...view details