ಚೆನ್ನೈ: ಸಂಗೀತ ದಿಗ್ಗಜ, ಭಾರತೀಯ ಚಿತ್ರರಂಗ ಕಂಡಿರುವ ಖ್ಯಾತ ಗಾಯಕ ಎಸ್.ಪಿ ಬಾಲಸುಬ್ರಹ್ಮಣ್ಯಂ(74) ಅವರು ಇಂದು ನಿಧನರಾಗಿದ್ದು, ಅವರ ಅಗಲಿಕೆಗೆ ಇಡೀ ದೇಶ ಕಂಬನಿ ಮಿಡಿದಿದೆ.
ತೋಟದ ಮನೆಯಲ್ಲಿ ನಾಳೆ ಗಾನ ಗಾರುಡಿಗ ಎಸ್ಪಿಬಿ ಅಂತ್ಯಕ್ರಿಯೆ - SP Balasubrahmanyam news
ಭಾರತೀಯ ಚಿತ್ರರಂಗ ಕಂಡಿರುವ ಅತ್ಯಮೂಲ್ಯ ಗಾಯಕ ಎಸ್ಪಿ ಬಾಲಸುಬ್ರಹ್ಮಣ್ಯಂ ಇಹಲೋಕ ತ್ಯಜಿಸಿದ್ದು, ಸಂಪ್ರದಾಯದಂತೆ ನಾಳೆ ಅವರ ಅಂತ್ಯಕ್ರಿಯೆ ನಡೆಯಲಿದೆ.
s p balasubrahmanyam cremation
ಆಗಸ್ಟ್ 5ರಂದು ಆಸ್ಪತ್ರೆಗೆ ದಾಖಲಾಗಿದ್ದ ಎಸ್ಪಿಬಿ ಇಂದು ಮಧ್ಯಾಹ್ನ ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದು, ಅವರ ತೋಟದ ಮನೆಯಲ್ಲಿ ಸಕಲ ವಿಧಿ-ವಿಧಾನಗಳ ಮೂಲಕ ನಾಳೆ ಅಂತ್ಯಕ್ರಿಯೆ ನೆರವೇರಲಿದೆ.
ಎಂಜಿಎಂ ಆಸ್ಪತ್ರೆಯಿಂದ ಎಸ್ಪಿಬಿ ಪಾರ್ಥಿವ ಶರೀರವನ್ನ ಈಗಾಗಲೇ ಮನೆಗೆ ತರಲಾಗಿದ್ದು, ಸಂಪ್ರದಾಯದಂತೆ ವಿಧಿ-ವಿಧಾನ ನಡೆಸಲಾಗುತ್ತಿದೆ. ಅವರ ನಿವಾಸದಲ್ಲೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ಅನೇಕ ನಟರು ಎಸ್ಪಿಬಿ ನಿವಾಸದತ್ತ ತೆರಳಿ ಅಗಲಿದ ಗಾನ ಗಾರುಡಿಗನ ಅಂತಿಮ ದರ್ಶನ ಪಡೆದುಕೊಳ್ಳುತ್ತಿದ್ದಾರೆ.