ಮಾಸ್ಕೋ: ರಷ್ಯಾ ಪ್ರಧಾನಿ ದಿಮಿಟ್ರಿ ಮಿದ್ವೆದೆವ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಇದಕ್ಕೆ ಆಡಳಿತ ವೈಫಲ್ಯ ಕಾರಣ ಎಂದು ಹೇಳಲಾಗುತ್ತಿದೆ.
ಅಧ್ಯಕ್ಷ ಪುಟಿನ್ ಅವರು ರಾಜೀನಾಮೆ ಸ್ವೀಕರಿಸಿದ್ದು, ಮಿದ್ವೆದೆವ್ ಅವರ ಸೇವೆಗೆ ಧನ್ಯವಾದಗಳನ್ನು ಹೇಳಿದರು. ದಿಮಿಟ್ರಿ ಅವರ ರಾಜೀನಾಮೆಗೆ ಆಡಳಿತ ವೈಫಲ್ಯ ಕಾರಣ ಎಂದು ರಷ್ಯಾ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.