ಕರ್ನಾಟಕ

karnataka

ETV Bharat / bharat

ಕೊರೊನಾ ಸೋಂಕಿಗೆ ಜಗತ್ತಿನ ಮೊದಲ ಲಸಿಕೆ ಸಿದ್ಧ: ರಷ್ಯಾ ಅಧ್ಯಕ್ಷರಿಂದ ಘೋಷಣೆ - Vladimir Putin

ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿ ತೀವ್ರ ಸಂಕಷ್ಟದಲ್ಲಿರುವ ಇಡೀ ವಿಶ್ವಕ್ಕೆ ಇದೀಗ ರಷ್ಯಾ ಸಂಜೀವಿನಿಯಾಗಲಿದೆ. ರಷ್ಯಾದಲ್ಲಿ ವಿಶ್ವದಲ್ಲಿಯೇ ಮೊದಲ ಬಾರಿಗೆ ಈ ರೋಗಕ್ಕೆ ಲಸಿಕೆ ನೋಂದಾವಣೆಯಾಗಿದ್ದು, ಹಲವು ತಿಂಗಳುಗಳ ಸಂಶೋಧನೆಗೆ ಫಲ ಸಿಕ್ಕಿದೆ. ಲಸಿಕೆ ತಯಾರಿಕೆಯ ಕುರಿತು ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್​ ಅಧಿಕೃತವಾಗಿ ಇಂದು ಘೋಷಿಸಿದ್ದಾರೆ.

Russia Has Developed "First" Coronavirus Vaccine, Says Vladimir Putin
ಮಹಾಮಾರಿ ಕೊರೊನಾಗೆ ಸಿದ್ಧವಾಯ್ತು ಲಸಿಕೆ: ರಷ್ಯಾ ಅಧ್ಯಕ್ಷ ಘೋಷಣೆ

By

Published : Aug 11, 2020, 3:27 PM IST

ಮಾಸ್ಕೊ (ರಷ್ಯಾ): ಮಹಾಮಾರಿ ಕೊರೊನಾ ವೈರಸ್​​​ಗೆ ಕಡಿವಾಣ ಹಾಕುವಲ್ಲಿ ರಷ್ಯಾ ಒಂದು ಹೆಜ್ಜೆ ಮುಂದೆ ಸಾಗಿದೆ. ಕೋವಿಡ್ ಲಸಿಕೆಯನ್ನು ನೋಂದಾಯಿಸಿದ ವಿಶ್ವದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಆ ದೇಶ ಪಾತ್ರವಾಗಿದೆ. ಈ ಕುರಿತು ಅಧ್ಯಕ್ಷ ವ್ಲಾಡಿಮಿರ್ ಪುಟಿನ್​​​​​ ಅಧಿಕೃತವಾಗಿ ಘೋಷಿಸಿಕೊಂಡಿದ್ದಾರೆ.

ಸರ್ಕಾರಿ ಸಭೆಯೊಂದರಲ್ಲಿ ಮಾತನಾಡಿರುವ ಅವರು, ಇಂದು ಬೆಳಗ್ಗೆ ಕೊರೊನಾ ವೈರಸ್​ಗೆ ಲಸಿಕೆ ನೋಂದಾವಣೆಗೊಂಡಿದ್ದು, ಬಹುಶಃ ಇದು ವಿಶ್ವದಲ್ಲೇ ಮೊದಲು ಎಂದಿದ್ದಾರೆ.

ಭವಿಷ್ಯದಲ್ಲಿ ಈ ಲಸಿಕೆಯನ್ನು ಇನ್ನಷ್ಟು ಹೆಚ್ಚು ಉತ್ಪಾದನೆ ಮಾಡಲಾಗುತ್ತದೆ. ಈ ಲಸಿಕೆಯ ಅವಶ್ಯಕತೆಯೂ ಹೆಚ್ಚಿದೆ ಎಂದು ತಿಳಿಸಿದ್ದಾರೆ.

ಪುಟಿನ್ ಮಗಳಿಗೆ ಲಸಿಕೆ:

ಈ ಲಸಿಕೆಯನ್ನು ತನ್ನ​​ ಮಗಳಿಗೆ ನೀಡಲಾಗಿದೆ ಎಂದು ಪುಟಿನ್‌ ಹೇಳಿದ್ದಾರೆ. ಲಸಿಕೆ ಸಂಶೋಧನೆಯ ಭಾಗವಾಗಿದ್ದ ನನ್ನ ಮಗಳ ದೇಹದ ಉಷ್ಣಾಂಶ 38 ಡಿಗ್ರಿ ಸೆಲ್ಸಿಯಸ್‌ನಷ್ಟಿತ್ತು. ಲಸಿಕೆ ತೆಗೆದುಕೊಂಡ ಒಂದು ದಿನದ ಬಳಿಕ 37 ಡಿಗ್ರಿ ತಲುಪಿತ್ತು ಎಂದಿದ್ದಾರೆ.

ಈ ಔಷಧಿಯನ್ನು ಗಾಮಾಲೇಯಾದಲ್ಲಿನ ಮೈಕ್ರೋ ಬಯೋಲಜಿ ರಿಸರ್ಚ್​ ಸೆಂಟರ್​ ನೋಂದಾಯಿಸಿದ್ದು, ಸುರಕ್ಷಿತ ಹಾಗೂ ಪರಿಣಾಮಕಾರಿಯಾಗಿದೆ ಎಂಬುದು ಈಗಾಗಲೇ ದೃಢವಾಗಿದೆ ಎಂದು ಅಲ್ಲಿನ ಆರೋಗ್ಯ ಸಚಿವ ಮಿಕೈಲ್ ಮುರಸ್ಕೊ ಮಾಹಿತಿ ನೀಡಿದ್ದಾರೆ.

ಅಕ್ಟೋಬರ್‌ ತಿಂಗಳಿನಿಂದ ಉತ್ಪಾದನೆ:

ಪ್ರಪಂಚದಲ್ಲೇ ಮೊದಲ ದೇಶವಾಗಿ ಕೊರೊನಾ ವೈರಸ್‌ಗೆ ಲಸಿಕೆ ಕಂಡು ಹಿಡಿದಿದ್ದು, ಈಗಾಗಲೇ ಕ್ಲಿನಿಕಲ್‌ ಟ್ರಯಲ್ (ಮನುಷ್ಯನ ಮೇಲಿನ ಪ್ರಯೋಗ)‌ ಯಶಸ್ವಿಯಾಗಿದೆ. ಹೀಗಾಗಿ ಲಸಿಕೆಯ ನೋಂದಣಿ ಕಾರ್ಯ ಪೂರ್ಣಗೊಳಿಸಿದೆ. ಅಕ್ಟೋಬರ್​ ತಿಂಗಳಿಂದಲೇ ಹೆಚ್ಚಿನ ಪ್ರಮಾಣದಲ್ಲಿ ಸಾಮೂಹಿಕವಾಗಿ ಲಸಿಕೆ ಉತ್ಪಾದನೆ ಮಾಡಲು ಮುಂದಾಗಿದೆ ಎಂದು ತಿಳಿದು ಬಂದಿದೆ.

ABOUT THE AUTHOR

...view details