ಅಹಮದಾಬಾದ್:ಗ್ರಾಮೀಣ ಭಾರತ ಇದೀಗ ಬಯಲು ಶೌಚ ಮುಕ್ತವಾಗಿದೆ. 60 ಕೋಟಿ ಭಾರತೀಯರಿಗೆ 11 ಕೋಟಿ ಶೌಚಾಲಯ ನಿರ್ಮಿಸಿ ಕೊಡಲಾಗಿದ್ದು, 2014ರಲ್ಲಿ ಕಾರ್ಯರೂಪಕ್ಕೆ ತಂದಿರುವ ಸ್ವಚ್ಛ ಭಾರತ ಯೋಜನೆ ಯಶಸ್ವಿಯಾಗಿದೆ ಎಂದು ಪ್ರಧಾನಿ ಮೋದಿ ಘೋಷಿಸಿದ್ರು.
ಗಾಂಧೀಜಿ 150ನೇ ಜನ್ಮದಿನ ಅಂಗವಾಗಿ ಪ್ರಧಾನಿ ಮೋದಿ ಅಹಮದಾಬಾದ್ನ ಸಬರಮತಿ ಆಶ್ರಮದಲ್ಲಿ ಸ್ವಚ್ಚ ಭಾರತ ಅಭಿಯಾನದ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ್ರು.
ಮಹಾತ್ಮ ಗಾಂಧೀಜಿಯವರ 150ನೇ ವಾರ್ಷಿಕೋತ್ಸವವನ್ನು ವಿಶ್ವಸಂಸ್ಥೆಯಲ್ಲಿ ಅಪಾರ ಉತ್ಸಾಹದಿಂದ ಗುರುತಿಸಲಾಗಿದೆ. ಜಗತ್ತು ಎದುರಿಸುತ್ತಿರುವ ಯಾವುದೇ ಸಮಸ್ಯೆಯನ್ನೇ ತೆಗೆದುಕೊಳ್ಳಿ, ಗಾಂಧೀಜಿ ಬೋಧನೆ ಅದಕ್ಕೆ ಪರಿಹಾರ ನೀಡುತ್ತವೆ ಎಂದರು.