ಮುಂಬೈ:ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ದಾಖಲೆಯ ಮೌಲ್ಯ ಕಳೆದುಕೊಂಡು 74 ರೂಗೆ ತಲುಪಿದೆ.
ಕೊರೊನಾ ವೈರಸ್ ಭೀತಿಯಿಂದಾಗಿ ಜಾಗತಿಕ ಮಾರುಕಟ್ಟೆಗಳಲ್ಲಿ ತಲ್ಲಣ ಸೃಷ್ಟಿಯಾಗಿವೆ. ಇದು ಭಾರತದ ರೂಪಾಯಿ ಮೇಲೆಯೂ ಪರಿಣಾಮ ಬೀರಿದ್ದು, ಡಾಲರ್ ಎದುರು ಮಂಡಿಯೂರಿದೆ. ನಿನ್ನೆ 73.33 ರೂ.ನಲ್ಲಿ ವಹಿವಾಟು ನಡೆಸುತ್ತಿತ್ತು. ಇಂದು ಇದು 73.99 ರೂ.ಗೆ ಜಿಗಿತ ಕಂಡಿದೆ.