ಕರ್ನಾಟಕ

karnataka

ETV Bharat / bharat

ನಡು ರಸ್ತೆಯಲ್ಲಿ ಮಹಿಳೆ ಮೇಲೆ ಹಲ್ಲೆ ನಡೆಸಿದ ವೈಸಿಪಿ ಪಕ್ಷದ ಮುಖಂಡ... ವಿಡಿಯೋ ವೈರಲ್​​! - ಕಡಪ ಮಹಿಳೆಯ ಮೇಲೆ ಹಲ್ಲೆ

ವೈಸಿಪಿ ಪಕ್ಷದ ಮುಖಂಡನೋರ್ವ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆ ತನ್ನನ್ನು ನೋಡಿದ್ದಾಳೆಂದು ಆಕ್ರೊಶಗೊಂಡು ಹಲ್ಲೆ ನಡೆಸಿರುವ ಘಟನೆ ನಡೆದಿದೆ.

Attacked A Woman
ನಡು ರಸ್ತೆಯಲ್ಲಿ ಮಹಿಳೆಯ ಮೇಲೆ ಹಲ್ಲೆ

By

Published : Jun 12, 2020, 10:25 PM IST

ಕಡಪ(ಆಂಧ್ರ ಪ್ರದೇಶ): ವೈಸಿಪಿ ಪಕ್ಷದ ಮುಖಂಡ ಮೆಹಬೂಬ್ ಬಾಷಾ ಎಂಬಾತ ರಸ್ತೆಯಲ್ಲಿ ನಡೆದುಕೊಂಡ ಹೋಗುತ್ತಿದ್ದ ಮಹಿಳೆಯೋರ್ವಳ ಮೇಲೆ ಹಲ್ಲೆ ನಡೆಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ನಡು ರಸ್ತೆಯಲ್ಲಿ ಮಹಿಳೆಯ ಮೇಲೆ ಹಲ್ಲೆ

ಕಡಪ ಜಿಲ್ಲೆಯ ರವೀಂದ್ರ ನಗರದ ರಾಮಲಕ್ಷ್ಮಿ ಎಂಬ ಮಹಿಳೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಅಲ್ಲೇ ರಸ್ತೆಯಲ್ಲಿದ್ದ ಮೆಹಬೂಬ್ ಬಾಷಾರನ್ನು ನೋಡಿದ್ದಾಳೆ. ಆಕೆಯ ನೋಟದಿಂದ ಕುಪಿತಗೊಂಡ ವೈಸಿಪಿ ಮುಖಂಡ ಬಾಷಾ, ನನ್ನನ್ನು ದಿಟ್ಟಿಸಿ ನೋಡಲು ಎಷ್ಟು ಧೈರ್ಯ ನಿನಗೆ ಎಂದು ಗದರಿಸಿ, ಮೇಲೆ ಹಲ್ಲೆ ನಡೆಸಿದ್ದಾನೆ.

ಸ್ಥಳದಲ್ಲಿದ್ದ ಜನರು ಆತನನ್ನು ನಿಯಂತ್ರಿಸಲು ಪ್ರಯತ್ನಿಸಿದರಾದರೂ ಸಾಧ್ಯವಾಗಲಿಲ್ಲ. ಸ್ಥಳೀಯರು ಈ ದೃಶ್ಯವನ್ನು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು, ಸದ್ಯ ಪೊಲೀಸರು ಮೆಹಬೂಬ್ ಬಾಷಾ ವಿರುದ್ಧ ಪ್ರಕರಣ ದಾಖಲಿಸಿ ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ABOUT THE AUTHOR

...view details