ಅಮರಾವತಿ: ಆಂಧ್ರಪ್ರದೇಶದ ಆಟೋ ಮತ್ತು ಕ್ಯಾಬ್ ಚಾಲಕರಿಗೆ ಸಿಎಂ ಜಗನ್ ಮೋಹನ್ ರೆಡ್ಡಿ ಅವರು ವಾಹನ ಮಿತ್ರ ಎಂಬ ಯೋಜನೆ ಜಾರಿಗೆ ತಂದು ಪ್ರತಿ ಆಟೋ, ಟ್ಯಾಕ್ಸಿ ಮತ್ತು ಕ್ಯಾಬ್ ಚಾಲಕರಿಗೆ ವರ್ಷವೊಂದಕ್ಕೆ 10 ಸಾವಿರ ರೂ. ಸಹಾಯಧನ ನೀಡಿದರು.
ಕನ್ನಡಿಗರ 'ಆಟೋ'ರಾಜ ಶಂಕರ್ ನಾಗ್ನಂತೆ ಆಂಧ್ರ ಆಟೋದವರಿಗೆ ಜಗನ್ ಹೀರೋ..! - ಸಿಎಂ ಜಗನ್ ಮೋಹನ್ ರೆಡ್ಡಿ
ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಅವರು ವಾಹನ ಮಿತ್ರ ಎಂಬ ಯೋಜನೆ ಜಾರಿಗೆ ತಂದು ಪ್ರತಿ ಆಟೋ, ಟ್ಯಾಕ್ಸಿ ಮತ್ತು ಕ್ಯಾಬ್ ಚಾಲಕರಿಗೆ ವರ್ಷವೊಂದಕ್ಕೆ 10 ಸಾವಿರ ರೂ. ಸಹಾಯಧನ ನೀಡಿದರು. ಈಗ ಇದಕ್ಕೆ ಕೃತಜ್ಞ ರೂಪಕವೆಂಬಂತೆ ಆಂಧ್ರದ ಆಟೋ ಚಾಲಕರು ಜಗನ್ ಭಾವಚಿತ್ರಗಳನ್ನು ತಮ್ಮ ಆಟೋಗಳ ಹಿಂಭಾಗ, ಮುಂಭಾಗ, ಕನ್ನಡಿ ಮೇಲೆ ಹಾಕಿಕೊಂಡಿದ್ದಾರೆ.
ಈಗ ಇದಕ್ಕೆ ಕೃತಜ್ಞ ರೂಪಕವೆಂಬಂತೆ ಆಂಧ್ರದ ಆಟೋ ಚಾಲಕರು ಜಗನ್ ಭಾವಚಿತ್ರಗಳನ್ನು ತಮ್ಮ ಆಟೋಗಳ ಹಿಂಭಾಗ, ಮುಂಭಾಗ, ಕನ್ನಡಿ ಮೇಲೆ ಹಾಕಿಕೊಂಡಿದ್ದಾರೆ. ಕರ್ನಾಟಕದ ಆಟೋ ಚಾಲಕರು ನಟ ಶಂಕರ್ ನಾಗ್ ಅವರನ್ನು ಕಂಡರೆ ಗೌರವಿಸುವ ಮತ್ತು ಆರಾಧಿಸುವಂತಿದೆ ಜಗನ್ ಅವರ ಭಾವಚಿತ್ರಗಳನ್ನು ಒಳಗೊಂಡ ಸ್ಟಿಕ್ಕರ್ಗಳಿವೆ.
ರಸ್ತೆ ಸಾರಿಗೆ ಪ್ರಾಧಿಕಾರದ (ಆರ್‌ಟಿಎ) ಅಧಿಕಾರಿಗಳು ಆಟೋಗಳಲ್ಲಿ ಸ್ಟಿಕ್ಕರ್‌ಗಳನ್ನು ಅಂಟಿಸುತ್ತಿದ್ದಾರೆ. ಇದು ಆಟೋ ಚಾಲಕರು ಸಿಎಂ ವೈ.ಎಸ್.ಜಗನ್ಮೋಹನ್ ರೆಡ್ಡಿ ಅವರಿಗೆ 'ವಾಹನಾ ಮಿತ್ರ ಯೋಜನೆ'ಗೆ ಕೃತಜ್ಞತೆ ಸಲ್ಲಿಸುತ್ತಾರೆ ಎಂಬಂತೆ ತೋರಿಸುತ್ತದೆ. ಯೋಜನೆಯ ಹಣವನ್ನು ವಿಮೆ, ವಾಹನ ರಿಪೇರಿ ಸೇರಿದಂತೆ ನಿರ್ವಹಣೆಗೆ ಈ ಹಣವನ್ನು ಬಳಸಿಕೊಳ್ಳಬಹುದು.