ಕರ್ನಾಟಕ

karnataka

ETV Bharat / bharat

ಪಿಒಕೆ ತ್ಯಜಿಸುವಂತೆ ಪಾಕಿಸ್ತಾನದ ವಿರುದ್ಧ ಅಭಿಯಾನ ಆರಂಭಿಸಿದ ಆರ್​​ಎಸ್​​ಎಸ್​​ ನಾಯಕ - ಫಾರುಖ್ ಅಬ್ದುಲ್ಲಾ

ಪಾಕ್ ಆಕ್ರಮಿತ ಕಾಶ್ಮೀರದಿಂದ ಪಾಕಿಸ್ತಾನ ತನ್ನ ಸೇನೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಆರ್​ಎಸ್​​ಎಸ್ ನಾಯಕ ಇಂದ್ರೇಶ್ ಕುಮಾರ್ ಅಭಿಯಾನವೊಂದಕ್ಕೆ ಚಾಲನೆ ನೀಡಿದ್ದಾರೆ. ಪಿಒಕೆ ಮತ್ತು ಗಿಲ್ಗಿಟ್-ಬಾಲ್ಟಿಸ್ತಾನ್​​ಗಾಗಿ ಧ್ವನಿ ಎತ್ತಲಾಗುವುದು. ಇದರಿಂದ ಪಿಒಕೆಯನ್ನು ತೊರೆಯುವಂತೆ ಪಾಕಿಸ್ತಾನಕ್ಕೆ ಒತ್ತಡ ಹಾಕಲಾಗುವುದು ಎಂದಿದ್ದಾರೆ.

RSS
ಆರ್​​ಎಸ್​​ಎಸ್​

By

Published : Nov 18, 2020, 9:37 AM IST

ಶ್ರೀನಗರ:ಜಮ್ಮು ಕಾಶ್ಮೀರದಗಿಲ್ಗಿಟ್​​-ಬಾಲ್ಟಿಸ್ತಾನ್ ಹಾಗೂ ಪಿಒಕೆ ತೊರೆಯುವಂತೆ ಪಾಕಿಸ್ತಾನದ ವಿರುದ್ಧ ಆರ್​ಎಸ್​ಎಸ್​​​ ನಾಯಕ ಅಭಿಯಾನ ಆರಂಭಿಸಿದ್ದಾರೆ.

ಇಲ್ಲಿನ ಆರ್​ಎಸ್​​ಎಸ್ ನಾಯಕ ಇಂದ್ರೇಶ್ ಕುಮಾರ್ ಪಾಕಿಸ್ತಾನದ ವಿರುದ್ಧ ಈ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಇಷ್ಟೆ ಅಲ್ಲದೇ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮಫ್ತಿ ಮತ್ತು ಫಾರುಖ್ ಅಬ್ದುಲ್ಲಾರಿಗೆ ಭಾರತ ತ್ಯಜಿಸಿ ಪಾಕಿಸ್ತಾನಕ್ಕೆ ತೆರಳಿ ನೆಲೆಸುವಂತೆ ತಿಳಿಸಿದ್ದಾರೆ.

ಇಲ್ಲಿನ ರಾಷ್ಟ್ರೀಯ ಮುಸ್ಲಿಂ ಮಂಚ್ ಸಮಾವೇಶದಲ್ಲಿ ಮಾತನಾಡುತ್ತ, ನೀವು ಹಿಂದೂಸ್ತಾನವನ್ನು ತೊರೆಯಬೇಕು, ಕಾಶ್ಮೀರವನ್ನೂ ತೊರೆಯಬೇಕು ಚೀನಾಗೆ ತೆರಳಿ ನೆಲಸಬೇಕು ಎಂದು ಫಾರುಖ್ ಅಬ್ದುಲ್ಲಾಗೆ ಹೇಳಿದ್ದರು.

ಜಮ್ಮು ಕಾಶ್ಮೀರ ಕುರಿತು ಚೀನಾ ಬೆಂಬಲ ಕೋರಿದ್ದ ಫಾರುಖ್ ಕುರಿತು ವಾಗ್ದಾಳಿ ನಡೆಸುತ್ತಾ, ಚೀನಾಕ್ಕೆ ಹೋಗಿ ನಮ್ಮ ಮೇಲೆ ಕರುಣೆ ತೋರುವಂತೆ ಕೇಳುವ ನಿರ್ಣಯವನ್ನು ಅಂಗೀಕರಿಸೋಣ ಎಂದು ಕಿಡಿಕಾರಿದ್ದರು.

ಅಲ್ಲದೆ ಕೇಂದ್ರಾಡಳಿತ ಪ್ರದೇಶದ ಯುವಜನತೆ ಈಗ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮಫ್ತಿಗೆ ಬಯಸಿದಲೆಲ್ಲಾ ಹೋಗು ಎಂದು ಹೇಳುತ್ತಿದ್ದಾರೆ. ಈ ನಾಯಕರು ಜೈಲಿಗೆ ತೆರಳಿದಾಗ ಅವರ ಪಕ್ಷದ ಯಾವೊಬ್ಬ ಸದಸ್ಯರಿಗೂ ನೋವಾಗಿರಲಿಲ್ಲ ಎಂದಿದ್ದಾರೆ.

ಯಾರೊಬ್ಬರು ರಸ್ತೆಗಿಳಿದು ಪ್ರತಿಭಟನೆ ನಡೆಸಲಿಲ್ಲ. ಕಾಶ್ಮೀರ ಬಂದ್ ಅಥವಾ ಪರ್ವತ ಸಾಲುಗಳಲ್ಲಿ ಮುಷ್ಕರ ನಡೆಸುವುದನ್ನು ನಾನು ಗಮನಿಸಲಿಲ್ಲ. ಬದಲಿಗೆ ಜನರನ್ನು ಲೂಟಿ ಮಾಡಿದವರು ಜೈಲಿಗೆ ಹೋಗಿದ್ದಾರೆ ಎಂದು ಜನತೆ ಸಂತಸಪಟ್ಟಿದ್ದಾರೆ ಎಂದಿದ್ದಾರೆ.

70 ವರ್ಷಗಳ ಬಳಿಕ ಭಾರತ ಒಂದು ದೇಶವಾಗಿ ಮಾರ್ಪಟ್ಟಿದೆ. ಒಂದು ರಾಷ್ಟ್ರ, ಒಂದು ಸಂವಿಧಾನ, ಒಂದು ಧ್ವಜ, ಒಂದು ಪೌರತ್ವ, ಒಂದು ಘೋಷಣೆ ಮತ್ತು ಒಂದು ರಾಷ್ಟ್ರಗೀತೆ ಎಂದರು.

ಈಗ ಪಿಒಕೆ ಮತ್ತು ಗಿಲ್ಗಿಟ್ - ಬಾಲ್ಟಿಸ್ತಾನ್​​ಗಾಗಿ ಧ್ವನಿ ಎತ್ತಲಾಗುವುದು. ಅವರು ಎಂದಿಗೂ ಭಾರತದ ಭಾಗವೇ ಆಗಿದ್ದಾರೆ. ಪಾಕಿಸ್ತಾನವನ್ನು ಪಿಒಕೆ ಹಾಗೂ ಬಾಲ್ಟಿಸ್ತಾನದಿಂದ ಖಾಲಿ ಮಾಡಿಸಲು ಅಭಿಯಾನ ಆರಂಭಿಸಲಾಗುವುದು. ಈ ಎರಡೂ ಕಡೆಯಿಂದಲೂ ಪಾಕಿಸ್ತಾನ ತನ್ನ ಸೇನೆಯನ್ನು ವಾಪಸ್​​​ ಕರೆಯಿಸಿಕೊಳ್ಳಬೇಕು ಎಂದು ಕುಮಾರ್ ತಿಳಿಸಿದ್ದಾರೆ.

ABOUT THE AUTHOR

...view details