ಕರ್ನಾಟಕ

karnataka

By

Published : Feb 20, 2020, 11:49 AM IST

ETV Bharat / bharat

'ನ್ಯಾಷನಲಿಸಂ' ಎಂಬ ಶಬ್ದದ ಅರ್ಥ ಹಿಟ್ಲರ್, ನಾಜಿವಾದ ಎಂದಾಗುತ್ತದೆ: ಮೋಹನ್​ ಭಾಗವತ್​

ನ್ಯಾಷನಲಿಸಂ ಎಂದು ಹೇಳಬೇಡಿ. ಬದಲಿಗೆ 'ನೇಷನ್' ಎನ್ನಿ, ಇಲ್ಲವೇ 'ನ್ಯಾಷನಲ್' ಅಂತ ಬಳಸಬಹುದು, 'ನ್ಯಾಷನಾಲಿಟಿ' ಅಂದ್ರೂ ನಡೆಯುತ್ತೆ. ಆದ್ರೆ, ನ್ಯಾಷನಲಿಸಂ ಎಂಬ ಪದದ ಬಳಕೆಯನ್ನು ಮಾತ್ರ ಮಾಡ್ಬೇಡಿ. ಯಾಕಂದ್ರೆ, ಅದರ ಅರ್ಥ ಹಿಟ್ಲರ್​ ನಾಜಿವಾದ​ ಎಂದಾಗುತ್ತದೆ ಎಂದು ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್ ತಿಳಿಸಿದ್ದಾರೆ.

rss-chief
ಮೋಹನ್​ ಭಾಗವತ್​

ರಾಂಚಿ(ಜಾರ್ಖಂಡ್) : 'ನ್ಯಾಷನಲಿಸಂ' ಎಂಬ ಶಬ್ಧದ ಅರ್ಥ ಹಿಟ್ಲರ್, ನಾಜಿವಾದ ಎಂದಾಗುತ್ತದೆ. ಅದಕ್ಕಾಗಿ ನ್ಯಾಷನಲಿಸಂ ಎಂಬ ಪದದ ಬಳಕೆ ಬೇಡ ಎಂದು ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್​ ಹೇಳಿದರು.

ರಾಂಚಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಅಮೆರಿಕದಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತರೊಂದಿಗಿನ ತಮ್ಮ ಸಂಭಾಷಣೆಯನ್ನು ನೆನಪಿಸುತ್ತಾ, ನ್ಯಾಷನಲಿಸಂ ಎಂದು ಹೇಳಬೇಡಿ. ಬದಲಿಗೆ 'ನೇಷನ್' ಎನ್ನಿ, ಇಲ್ಲವೇ 'ನಾಷನಲ್' ಅಂತ ಬಳಸಬಹುದು, 'ನ್ಯಾಷನಾಲಿಟಿ' ಅಂದ್ರೂ ನಡೆಯುತ್ತೆ. ಆದ್ರೆ, ನ್ಯಾಷನಲಿಸಂ ಎಂಬ ಪದದ ಬಳಕೆಯನ್ನು ಮಾತ್ರ ಮಾಡ್ಬೇಡಿ ಯಾಕಂದ್ರೆ, ಅದರ ಅರ್ಥ ಹಿಟ್ಲರ್‌, ನಾಜಿವಾದ​ ಎಂದಾಗುತ್ತದೆ ಎಂದು ಕಾರ್ಯಕರ್ತರಿಗೆ ಕಿವಿಮಾತು ಹೇಳಿದ್ರು.

ABOUT THE AUTHOR

...view details