ಕರ್ನಾಟಕ

karnataka

ETV Bharat / bharat

ಆನ್‌ಲೈನ್ ವ್ಯಾಪಾರ ಹೂಡಿಕೆಯ ಹೆಸರಿನಲ್ಲಿ 850 ಜನರಿಗೆ ₹34 ಕೋಟಿ ವಂಚನೆ : ಇಬ್ಬರ ಬಂಧನ - Hyderabad CCS cyber crime police

ಆನ್‌ಲೈನ್ ವ್ಯಾಪಾರ ಹೂಡಿಕೆಯ ಹೆಸರಿನಲ್ಲಿ 850 ಜನರಿಗೆ ವಂಚನೆ ಮಾಡಿದ್ದ ಇಬ್ಬರು ಆರೋಪಿಗಳನ್ನ ಹೈದರಾಬಾದ್ ಸಿಸಿಎಸ್ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ..

Rs.34 crore cyber fraud on the name of online trading investment
ಇಬ್ಬರ ಬಂಧನ

By

Published : Dec 6, 2020, 7:48 AM IST

ಹೈದರಾಬಾದ್​ :ಆನ್‌ಲೈನ್ ವ್ಯಾಪಾರ ಹೂಡಿಕೆಯ ಹೆಸರಿನಲ್ಲಿ 850 ಜನರಿಗೆ ಸುಮಾರು 34 ಕೋಟಿ ರೂ. ವಂಚನೆ ಮಾಡಿರುವ ಪ್ರಕರಣ ಹೈದರಾಬಾದ್​ನಲ್ಲಿ ಬೆಳಕಿಗೆ ಬಂದಿದೆ.

ಸೈಬರ್​ ವಂಚನೆ ಮಾಡಿದ ಇಬ್ಬರು ಆರೋಪಿಗಳನ್ನ ಹೈದರಾಬಾದ್ ಸಿಸಿಎಸ್ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಸೈನಿಕಪುರಿಯ ಕೌಶಿಕ್ ಬ್ಯಾನರ್ಜಿ ಮತ್ತು ರೇಖಾ ಜಾಧವ್ ಬಂಧಿತ ಆರೋಪಿಗಳು. ಇವರು ಆನ್‌ಲೈನ್ ವ್ಯಾಪಾರ ಹೂಡಿಕೆಯ ಹೆಸರಿನಲ್ಲಿ ಹೈದರಾಬಾದ್‌, ದೆಹಲಿ, ಕೋಲ್ಕತ್ತಾ ಸೇರಿದಂತೆ ಇನ್ನೂ ಅನೇಕ ನಗರಗಳ ಸುಮಾರು 850 ಜನರಿಗೆ ವಂಚನೆ ಮಾಡಿದ್ದಾರೆ.

ಓದಿ:ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್ ಸೇರಿದಂತೆ 18 ಜನರ ವಿರುದ್ಧ ಎಫ್​ಐಆರ್​

3 ತಿಂಗಳ ಹಿಂದೆ ಇವರಿಂದ ವಂಚನೆಗೊಳಗಾದ ಖಯೂಮ್ ಖಾನ್ ಎನ್ನುವವರು ಹೈದರಾಬಾದ್ ಸಿಸಿಎಸ್ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರನ್ನ ಬಂಧಿಸಿದ್ದು, ಅವರನ್ನ ನಾಂಪಲ್ಲಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ABOUT THE AUTHOR

...view details