ಕರ್ನಾಟಕ

karnataka

ETV Bharat / bharat

ರಕ್ಷಣಾ ಪಡೆಗಳ ಆಧುನೀಕರಣಕ್ಕೆ 90 ಸಾವಿರ ಕೋಟಿ ರೂ. ಮೀಸಲು!

ಚೀನಾ ಹಾಗೂ ಭಾರತದ ನಡುವಿನ ಗಡಿ ಪ್ರದೇಶದಲ್ಲಿ ಉದ್ವಿಗ್ನತೆ ಹಿನ್ನೆಲೆಯಲ್ಲಿ ಸಶಸ್ತ್ರ ಪಡೆಗಳ ಆಧುನೀಕರಣಕ್ಕಾಗಿ 90 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ.

armed forces
ಸಶಸ್ತ್ರ ಪಡೆ

By

Published : Sep 15, 2020, 1:42 PM IST

ನವದೆಹಲಿ: 2020-2021ರಲ್ಲಿ ಸಶಸ್ತ್ರ ಪಡೆಗಳ ಆಧುನೀಕರಣಕ್ಕಾಗಿ ಸುಮಾರು 90,048 ಕೋಟಿ ರೂಪಾಯಿ ಬಂಡವಾಳವನ್ನು ಮೀಸಲಿಡಲಾಗಿದೆ ಎಂದು ರಕ್ಷಣಾ ಸೇವೆಗಳ ಅಂದಾಜು ವರದಿ ಮಾಹಿತಿ ನೀಡಿದೆ.

ಈ ಮೊತ್ತ ಹಿಂದಿನ ವರ್ಷಕ್ಕಿಂತ 9 ಸಾವಿರ ಕೋಟಿ ಏರಿಕೆಯಾಗಿದ್ದು, ಸೇನೆಗೆ ಹೊಸ ಸಾಮಗ್ರಿಗಳ ಸಂಗ್ರಹಣೆ, ಸದ್ಯಕ್ಕೆ ಇರುವ ಸಾಮಗ್ರಿಗಳನ್ನು ಹಾಗೂ ವ್ಯವಸ್ಥೆಯನ್ನು ಉನ್ನತೀಕರಿಸಲು ಈ ಬಂಡವಾಳವನ್ನು ಬಳಸಲಾಗುತ್ತದೆ.

ರಕ್ಷಣಾ ಇಲಾಖೆಯ ರಾಜ್ಯ ಸಚಿವ ಶ್ರೀಪಾದ್ ನಾಯಕ್​ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಬಂಡವಾಳ ಸಂಗ್ರಹಣೆ ಯೋಜನೆಡಿಯಲ್ಲಿ ಒಪ್ಪಿಗೆಯಾದ ಸಶಸ್ತ್ರ ಪಡೆಗಳ ಆಧುನೀಕರಣ ಪ್ರಕ್ರಿಯೆ ನಡೆಯುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಸೋಮವಾರ ರಾಜ್ಯಸಭಾ ಸದಸ್ಯರಾದ ಪಿ. ಭಟ್ಟಾಚಾರ್ಯ ಹಾಗೂ ವಿಜಯ್​ಪಾಲ್ ಸಿಂಗ್ ತೋಮರ್ ಅವರ ಪ್ರಶ್ನೆಗೆ ಈ ರೀತಿಯಾಗಿ ಉತ್ತರಿಸಿದ್ದಾರೆ. ಸಂಸತ್​ನ ಮಾನ್ಸೂನ್ ಅಧಿವೇಶನ ಸೋಮವಾರದಿಂದ ಆರಂಭವಾಗಿದ್ದು, ಅಕ್ಟೋಬರ್ 1ರವರೆಗೆ ನಡೆಯಲಿದೆ.

ABOUT THE AUTHOR

...view details