ನವದೆಹಲಿ : ನಗರದ ರಸ್ತೆಯೊಂದರಲ್ಲಿ ಚೈನ್ಡ್ ಬ್ಯಾರಿಕೇಡ್‌ನಿಂದ ಅಪಘಾತಕ್ಕೀಡಾಗಿ ಗಂಭೀರ ಸ್ಥಿತಿಯಲ್ಲಿರುವ ಯುವಕನಿಗೆ 75 ಲಕ್ಷ ರೂ. ಪರಿಹಾರ ನೀಡುವಂತೆ ದೆಹಲಿ ಹೈಕೋರ್ಟ್ ಪೊಲೀಸರಿಗೆ ನಿರ್ದೇಶನ ನೀಡಿದೆ.
ಬ್ಯಾರಿಕೇಡ್‌ನಿಂದ ಅಪಘಾತ: ಯುವಕನಿಗೆ 75 ಲಕ್ಷ ಪರಿಹಾರ ನೀಡುವಂತೆ ಸೂಚಿಸಿದ ಕೋರ್ಟ್ - Justice Navin Chawla
ರಸ್ತೆಯಲ್ಲಿ ಅಳವಡಿಸಿದ್ದ ಚೈನ್ಡ್ ಬ್ಯಾರಿಕೇಡ್ಗಳಿಂದ ಅಪಘಾತ ಸಂಭವಿಸಿ ಯುವಕ ಕೋಮಾ ಸ್ಥಿತಿಗೆ ಹೋದ ಪ್ರಕರಣಕ್ಕೆ ಸಂಬಂಧಪಟ್ಟಂತೆ. ಗಾಯಾಳು ಯುವಕನಿಗೆ 75 ಲಕ್ಷ ರೂ.ಪರಿಹಾರ ನೀಡುವಂತೆ ದೆಹಲಿ ಪೊಲೀಸರಿಗೆ ಹೈಕೋರ್ಟ್ ಸೂಚಿಸಿದೆ.
ಘಟನೆಯಲ್ಲಿ ಪೊಲೀಸರ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ, ಹೀಗಾಗಿ ಯುವಕ ಪರಿಹಾರ ಪಡೆಯಲು ಅರ್ಹನಾಗಿದ್ದಾನೆ ಎಂದು ಕೋರ್ಟ್ ಹೇಳಿದೆ. ಪೊಲೀಸರು ರಸ್ತೆಯಲ್ಲಿ ಬ್ಯಾರೀಕೆಡ್ಗಳನ್ನು ಸರಿಯಾಗಿ ಅಳವಡಿಸಿರಲಿಲ್ಲ ಅಲ್ಲದೆ ಬ್ಯಾರಿಕೇಡ್ಗಳಿಗೆ ರೇಡಿಯಂ ಅಳವಡಿಸಿಲ್ಲ. ಹೀಗಾಗಿ ಅಪಘಾತ ಸಂಭವಿಸಿದೆ ಎಂದು ಅರ್ಜಿದಾರ ಯುವಕನ ಪರ ವಕೀಲರು ನ್ಯಾಯಾಲಯದಲ್ಲಿ ವಾದಿಸಿದ್ದರು.
2015ರ ಡಿಸೆಂಬರ್ನಲ್ಲಿ ಮುಂಜಾನೆ ಧೀರಜ್ ಎಂಬ ಯುವಕ ತನ್ನ ತಂದೆಯೊಂದಿಗೆ ಬೈಕ್ನಲ್ಲಿ ತೆರಳುತ್ತಿದ್ದಾಗ ರಸ್ತೆಯಲ್ಲಿ ಪೊಲೀಸರು ಅಳವಡಿಸಿದ್ದ ಚೈನ್ಡ್ ಬ್ಯಾರೀಕೇಡ್ ಗಮನಿಸದೆ ಡಿಕ್ಕಿ ಹೊಡೆದಿದ್ದ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವಕ ಸದ್ಯ ಕೋಮಾ ಸ್ಥಿತಿಯಲ್ಲಿದ್ದಾನೆ. ಅಪಘಾತಕ್ಕೆ ಪೊಲೀಸರು ಅಳವಡಿಸಿದ್ದ ಬ್ಯಾರೀಕೇಡ್ ಕಾರಣ, ಹೀಗಾಗಿ ಯುವಕನ ಆಸ್ಪತ್ರೆ ಖರ್ಚು ಮತ್ತು ಭವಿಷ್ಯದ ಇತರ ಖರ್ಚುಗಳನ್ನು ಪರಿಗಣಿಸಿ ಪರಿಹಾರ ನೀಡಬೇಕೆಂದು ಯುವಕನ ತಂದೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಯ ಯುವಕನಿಗೆ 75 ಲಕ್ಷ ಪರಿಹಾರ ನೀಡುವಂತೆ ದೆಹಲಿ ಪೊಲೀಸರಿಗೆ ಸೂಚಿಸಿದೆ.