ಕರ್ನಾಟಕ

karnataka

ETV Bharat / bharat

ಬಂದೂಕಿನಿಂದ ಬೆದರಿಸಿ 7 ಕೋಟಿ ರೂ.ಮೌಲ್ಯದ ಚಿನ್ನಾಭರಣ ದರೋಡೆ..! - ಬಂದೂಕು ತೋರಿಸಿ 7 ಕೋಟಿ ರೂ.ಮೌಲ್ಯದ ಚಿನ್ನಾಭರಣ ದರೋಡೆ

ಗ್ರಾಹಕರ ಸೋಗಿನಲ್ಲಿ ಬಂದ ನಾಲ್ವರ ತಂಡ, ಕೆಲ ಕಾಲ ಮಾತುಕತೆ ನಡೆಸಿ ಬಳಿಕ ಗನ್​ ತೋರಿಸಿ ಬೆದರಿಸಿದ್ದಾರೆ. ಲಾಕರ್ ಕೀ ಪಡೆದು ಹಣ, ಸಿಬ್ಬಂದಿಯನ್ನು ಕಟ್ಟಿ ಹಾಕಿ ಚಿನ್ನಾಭರಣ, ನಗದು ದೋಚಿ ಪರಾರಿಯಾಗಿರುವ ಘಟನೆ ತಮಿಳುನಾಡಿನ ಕೃಷ್ಣಗಿರಿಯಲ್ಲಿ ನಡೆದಿದೆ.

gunpoint
ದರೋಡೆ

By

Published : Jan 22, 2021, 2:16 PM IST

ಕೃಷ್ಣಗಿರಿ (ತಮಿಳುನಾಡು):ಜಿಲ್ಲೆಯ ಹೊಸೂರು - ಬಾಗಲೂರು ರಸ್ತೆಯಲ್ಲಿರುವ ಮುತೂಟ್ ಫೈನಾನ್ಸ್​ನಲ್ಲಿ ದರೋಡೆ ನಡೆದಿದೆ. ಖದೀಮರು ಗನ್​ ತೋರಿಸಿ ಏಳು ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದೋಚಿದ್ದಾರೆ.

ಗ್ರಾಹಕರ ಸೋಗಿನಲ್ಲಿ ಬಂದ ನಾಲ್ವರ ತಂಡ, ಕೆಲ ಕಾಲ ಮಾತುಕತೆ ನಡೆಸಿ ಬಳಿಕ ಗನ್​ ತೋರಿಸಿ ಬೆದರಿಸಿದ್ದಾರೆ. ಲಾಕರ್ ಕೀ ಪಡೆದು ಹಣ, ಸಿಬ್ಬಂದಿ ಕಟ್ಟಿ ಹಾಕಿ ಚಿನ್ನಾಭರಣ, ನಗದು ದೋಚಿ ಪರಾರಿಯಾಗಿದ್ದಾರೆ.

ಕೂಡಲೇ ಸ್ಥಳಕ್ಕೆ ಬಂದ ಜನತೆ ಸಿಬ್ಬಂದಿಯನ್ನು ಬಿಡಿಸಿ, ಪೊಲೀಸರಿಗೆ ಸುದ್ದಿ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಹಿರಿಯ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿ, ತನಿಖೆ ಕೈಗೊಂಡಿದ್ದಾರೆ.

ABOUT THE AUTHOR

...view details