ಸೆಹೋರ್/ಬಿಹಾರ: ಅಂದಾಜು 32 ಲಕ್ಷಕ್ಕೂ ಅಧಿಕ ಹಣವನ್ನ ನಗರದಲ್ಲಿನ ಯುಕೋ(UCO) ಬ್ಯಾಂಕಿನಿಂದ ಖದೀಮರು ಕದ್ದೊಯ್ದ ಘಟನೆ ಸೋಮವಾರ ಸೆಹೋರ್ ನಗರದಲ್ಲಿ ನಡೆದಿದೆ.
ಬ್ಯಾಂಕಿನಿಂದ 32 ಲಕ್ಷ ಎಗರಿಸಿ ಖದೀಮರು ಎಸ್ಕೇಪ್! - bank robbery in sheohar
ಬಿಹಾರದ ಸೆಹೋರ್ ಜಿಲ್ಲೆಯಲ್ಲಿರುವ ಯುಕೋ ಬ್ಯಾಂಕಿನಲ್ಲಿ ಕಳ್ಳರು ತಮ್ಮ ಕೈ ಚಳಕ ತೋರಿದ್ದು, 32 ಲಕ್ಷ ರೂ ದರೋಡೆ ಮಾಡಿದ್ದಾರೆ.
![ಬ್ಯಾಂಕಿನಿಂದ 32 ಲಕ್ಷ ಎಗರಿಸಿ ಖದೀಮರು ಎಸ್ಕೇಪ್!](https://etvbharatimages.akamaized.net/etvbharat/prod-images/768-512-4896818-thumbnail-3x2-vicky.jpg)
Representative image
ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಬ್ಯಾಂಕಿನ ಸಿಸಿಟಿವಿ ಫೂಟೇಜ್ಗಳನ್ನು ಪರಿಶೀಲನೆ ನಡೆಸಿ, ಕೃತ್ಯ ಎಸಗಿದ ಗುಂಪು ಮುಖಕ್ಕೆ ಕಪ್ಪು ಬಟ್ಟೆ ಧರಿಸಿದ್ದು, ಶಸ್ತ್ರಾಸ್ತ್ರಗಳನ್ನು ಹೊಂದಿದ್ದರು ಎಂದು ತಿಳಿಸಿದ್ದಾರೆ.
ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ.
Last Updated : Oct 29, 2019, 12:20 PM IST