ನವದೆಹಲಿ:ನಿರ್ಮಲಾ ಸೀತಾರಾಮನ್ ನಡೆಸಿರುವ ಎರಡನೇ ಸುದ್ದಿಗೋಷ್ಠಿಯಲ್ಲಿ ಸಣ್ಣ, ಅತಿಸಣ್ಣ ರೈತರು ಹಾಗೂ ಬೀದಿ ವ್ಯಾಪಾರಿಗಳು, ವಲಸೆ ಕಾರ್ಮಿಕರಿಗೆ ನೀಡಿರುವ ವಿಶೇಷ ಪ್ಯಾಕೇಜ್ಗಳ ಬಗ್ಗೆ ಮಾಹಿತಿ ನೀಡಿದರು.
ದೇಶದಲ್ಲಿನ ಮೂರು ಕೋಟಿ ಅತಿಸಣ್ಣ, ಸಣ್ಣ ರೈತರಿಗೋಸ್ಕರ 30 ಸಾವಿರ ಕೋಟಿ ರೂ ಹೆಚ್ಚುವರಿಯಾಗಿ ತುರ್ತು ಸಾಲ ನೀಡುವ ನಿರ್ಧಾರ ಕೈಗೊಂಡಿದ್ದಾಗಿ ತಿಳಿಸಿರುವ ನಿರ್ಮಲಾ ಸೀತಾರಾಮನ್, ನಬಾರ್ಡ್ನಿಂದ ಕೃಷಿಗೆ ಹಣ ಮೀಸಲಿಡಲು ತೀರ್ಮಾನ ಕೈಗೊಂಡಿದ್ದು, ರಬಿ ಬೆಳೆ ಬೆಳೆಯುವ ರೈತರಿಗೆ ನೆರವು ನೀಡಲು ನಿರ್ಧರಿಸಿದ್ದಾರೆ. ಕಿಸಾನ್ ಕ್ರೆಡಿಟ್ ಕಾರ್ಡ್ನಿಂದ ಸಾಲ ವಿತರಣೆ ಮಾಡುವ ನಿರ್ಧಾರ ಕೈಗೊಳ್ಳಲಾಗಿದ್ದು, 2 ಲಕ್ಷ ಕೋಟಿ ರೂ. ಸಾಲ ನೀಡಲು ತೀರ್ಮಾನ ಮಾಡಲಾಗಿದೆ. ಇದರಿಂದ ಮೀನುಗಾರರು, ಹೈನುಗಾರಿಕೆಗೆ ಉಪಯೋಗ ಆಗಲಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿ ಕಾರ್ಮಿಕರಿಗೆ ಭರ್ಜರಿ ಗಿಫ್ಟ್... 2 ತಿಂಗಳ ಉಚಿತ ಪಡಿತರ ನೀಡಲು ನಿರ್ಧಾರ
ಬೀದಿ ವ್ಯಾಪಾರಿಗಳಿಗೆ ವಿಶೇಷ ಸಾಲ:
ದೇಶದ ಬೀದಿ ವ್ಯಾಪಾರಿಗಳಿಗೆ ವಿಶೇಷ ಸಾಲ ನೀಡಲು ನಿರ್ಧರಿಸಲಾಗಿದ್ದು, 50 ಲಕ್ಷ ಬೀದಿ ವ್ಯಾಪಾರಿಗಳಿಗೆ ನೆರವು ನೀಡಲು ಮುಂದಾಗಿದ್ದು, 5 ಸಾವಿರ ಕೋಟಿ ರೂಪಾಯಿ ಸಾಲ ನೀಡಲು ಕೇಂದ್ರ ತೀರ್ಮಾನ ಕೈಗೊಂಡಿದೆ. ಬೀದಿ ಬದಿ ವ್ಯಾಪಾರಿಗಳು ವ್ಯಾಪಾರ ಆರಂಭಿಸಲು 10 ಸಾವಿರ ರೂ. ಸಾಲ ನೀಡಲಾಗುವುದು. ಇದಕ್ಕಾಗಿ ಸುಲಭ ಸಾಲ ವಿಧಾನ ಕಲ್ಪಿಸಲಾಗುವುದು ಎಂದು ಸಚಿವರು ತಿಳಿಸಿದರು.
ಕಳೆದ 2 ತಿಂಗಳಲ್ಲಿ 7,200 ಸ್ವಸಹಾಯ ಸಂಘಗಳನ್ನು ಸ್ಥಾಪನೆ ಮಾಡಲಾಗಿದ್ದು, 12 ಸಾವಿರ ಸ್ವಸಹಾಯ ಸಂಘಗಳಿಂದ 3 ಕೋಟಿ ಮಾಸ್ಕ್‌ಗಳನ್ನು ತಯಾರಿಸಲಾಗಿದೆ. ಈವರೆಗೂ 1.2 ಲಕ್ಷ ಲೀಟರ್ ಸ್ಯಾನಿಟೈಸರ್ ತಯಾರಿಕೆ ಮಾಡಲಾಗಿದೆ ಎಂದು ಹಣಕಾಸು ಖಾತೆ ರಾಜ್ಯ ಸಚಿವರು ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿದರು.
ಮುದ್ರಾ ಶಿಶು ಸಾಲ ಯೋಜನೆಯಲ್ಲಿ 50 ಸಾವಿರ ರೂ. ವರೆಗೂ ಸಾಲ ಸೌಲಭ್ಯ ನೀಡಲು ತೀರ್ಮಾನ ಕೈಗೊಳ್ಳಲಾಗಿದ್ದು, ಮುದ್ರಾ ಶಿಶು ಸಾಲ ಯೋಜನೆಯಲ್ಲಿ ಸಾಲ ಪಡೆದವರಿಗೆ ಶೇ. 2ರಷ್ಟು ಕೇಂದ್ರವೇ ಭರಿಸಲಿದೆ ಎಂದರು.
ವಾರ್ಷಿಕ 6 ಲಕ್ಷದಿಂದ 18 ಲಕ್ಷದ ವರೆಗೂ ಆದಾಯ ಇರುವವರಿಗೆ ಗೃಹ ಸಾಲದ ಯೋಜನೆ, ಅದಕ್ಕಾಗಿ 70 ಸಾವಿರ ಕೋಟಿ ರೂ.ಮಧ್ಯಮದ ವರ್ಗದವರಿಗೆ ಗೃಹ ಸಾಲ ಸಬ್ಸಿಡಿ ಯೋಜನೆ ರೂಪಿಸಲಾಗಿದೆ ಎಂದರು. ಇದರಿಂದ 2.5 ಲಕ್ಷ ಕುಟುಂಬ ಲಾಭ ಪಡೆದುಕೊಳ್ಳಬಹುದು ಎಂದು ಸಚಿವೆ ರಾಷ್ಟ್ರದ ಜನತೆಗೆ ವಿವರಿಸಿರು.