ಕರ್ನಾಟಕ

karnataka

ETV Bharat / bharat

ವಿದ್ಯುತ್ ಕ್ಷೇತ್ರಕ್ಕೆ 22,000 ಕೋಟಿ: ಏನೆಲ್ಲಾ ಹೊಸ ನೀತಿಗಳು?

ಮುಂದಿನ ಮೂರು ವರ್ಷಗಳಲ್ಲಿ ಸಾಂಪ್ರದಾಯಿಕ ವಿದ್ಯುತ್ ಮೀಟರ್‌ಗಳ ಬದಲಾಗಿ ಸ್ಮಾರ್ಟ್ ಮೀಟರ್‌ಗಳ ಅಳವಡಿಕೆ ಮಾಡಲು ಮುಂದಾಗಬೇಕು ಎಂದು ಎಲ್ಲಾ ರಾಜ್ಯಗಳಿಗೆ ನಿರ್ಮಲಾ ಸೀತಾರಾಮನ್​ ಸೂಚನೆ ನೀಡಿದ್ದಾರೆ.

ವಿದ್ಯುತ್ ಕ್ಷೇತ್ರಕ್ಕೆ 22,00Rs 22,000 cr outlay for power, renewable energy sector in FY21: FM0 ಕೋಟಿ,
ವಿದ್ಯುತ್ ಕ್ಷೇತ್ರಕ್ಕೆ 22,000 ಕೋಟಿ

By

Published : Feb 1, 2020, 2:05 PM IST

ನವದೆಹಲಿ: ವಿದ್ಯುತ್ ಕ್ಷೇತ್ರಕ್ಕೆ ಈ ಬಾರಿಯ ಬಜೆಟ್​ನಲ್ಲಿ 22,000 ಕೋಟಿ ರೂ.ಗಳನ್ನು ನೀಡಲಾಗಿದೆ.

ಈ ಸಾಲಿನ ಬಜೆಟ್​ನಲ್ಲಿ ನವೀಕರಿಸಬಹುದಾದ ವಿದ್ಯುತ್​ ಕ್ಷೇತ್ರಕ್ಕೆ 22,000 ಕೋಟಿ ಹಣ ನೀಡಲಾಗಿದ್ದು, ಬಳಕೆದಾರರಿಗೆ ಅನುಕೂಲ ಆಗುವ ಹಾಗೆ ಕೆಲವು ನೀತಿಗಳನ್ನು ಜಾರಿಗೆ ತರಲು ಕೇಂದ್ರ ಮುಂದಾಗಿದೆ. ಇನ್ನು 24X7 ನಿಯಮದಲ್ಲಿ ವಿದ್ಯುತ್ ನೀಡಬೇಕೆಂಬ ಗುರಿಯನ್ನು ಸಾಕಾರಗೊಳಿಸಲು ಹಾಗೂ ಗ್ರಾಹಕರಿಗೆ ಸೇವಾ ಪೂರೈಕೆದಾರ ಮತ್ತು ಸುಂಕವನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಒದಗಿಸಲು ಪ್ರಸ್ತಾಪಿಸಲಾಗಿದೆ.

ಮುಂದಿನ ಮೂರು ವರ್ಷಗಳಲ್ಲಿ ಸಾಂಪ್ರದಾಯಿಕ ವಿದ್ಯುತ್ ಮೀಟರ್‌ಗಳ ಬದಲಾಗಿ ಸ್ಮಾರ್ಟ್ ಮೀಟರ್‌ಗಳ ಅಳವಡಿಕೆ ಮಾಡಲು ಮುಂದಾಗಬೇಕು ಎಂದು ಎಲ್ಲ ರಾಜ್ಯಗಳನ್ನು ಮನವಿ ಮಾಡಿದ ಅವರು, ಈ ಸ್ಮಾರ್ಟ್​ ಮೀಟರ್​ನಿಂದ ಗ್ರಾಹಕರಿಗೆ ಸೇವಾ ಪೂರೈಕೆದಾರರ ಆಯ್ಕೆ ಮತ್ತು ವಿದ್ಯುತ್ ದರವನ್ನು ನಿಖರವಾಗಿ ಒದಗಿಸಬಹುದು ಎಂದಿದ್ದಾರೆ.

ಈ ಸ್ಮಾರ್ಟ್ ಮೀಟರ್​ಗಳಿಂದ ಹಲವಾರು ಅನುಕೂಲ ಆಗಲಿದ್ದು, ಹಲವು ರೀತಿಯ ವೆಚ್ಚವನ್ನು ಉಳಿಸುವುದಲ್ಲದೇ, ಸಾರ್ವಜನಿಕ ಸೇವೆಯ ದಕ್ಷತೆಯನ್ನು ಸುಧಾರಿಸುತ್ತವೆ. ಈ ಬಗ್ಗೆ ಕಳೆದ ತಿಂಗಳು ವಿದ್ಯುತ್ ಸಚಿವಾಲಯವು, ಸ್ಮಾರ್ಟ್ ಮೀಟರ್ ಹೊಂದಿರುವ ಗ್ರಾಹಕರ ವಿದ್ಯುತ್ ದರವನ್ನು ಕಡಿಮೆ ಮಾಡುವಂತೆ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿತ್ತು.

22,000 ಕೋಟಿ ರೂ.ಗಳನ್ನು ಈ ಕ್ಷೇತ್ರಕ್ಕೆ ನೀಡಲಾಗುತ್ತಿದ್ದು, ಎಲ್ಲಾ ಮನೆಗಳಿಗೆ ವಿದ್ಯುತ್ ತಲುಪಿಸಿದರೆ ಅದೇ ಸರ್ಕಾರದ ಪ್ರಮುಖ ಯಶಸ್ಸು ಎಂದು ಅಭಿಪ್ರಾಯ ಪಟ್ಟ ಅವರು,ಸೌಭಾಗ್ಯ ಯೋಜನೆಯನ್ನು ಉಲ್ಲೇಖಿಸಿ, ಈ ಯೋಜನೆ ಅಡಿಯಲ್ಲಿ 2.66 ಕೋಟಿ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಪ್ರಸ್ತುತ, ಕಷ್ಟದ ಪ್ರದೇಶಗಳಲ್ಲಿ ಮತ್ತು ಮಾವೋವಾದಿ ಪೀಡಿತ ಜಿಲ್ಲೆಗಳಲ್ಲಿನ ಕೆಲವು ಮನೆಗಳನ್ನು ಹೊರತುಪಡಿಸಿ, ಎಲ್ಲಾ ಮನೆಗಳಿಗೆ ವಿದ್ಯುತ್ ಸಂಪರ್ಕವನ್ನು ಒದಗಿಸಲಾಗಿದೆ ಎಂದರು.

ಒಂದು ದಶಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇರುವ ನಗರಗಳಲ್ಲಿ ಸ್ಥಾಪಿತವಾಗಿರುವ ಹಳೆಯ ಉಷ್ಣ ವಿದ್ಯುತ್ ಸ್ಥಾವರಗಳನ್ನು ಸ್ಥಗಿತಗೊಳಿಸಲು ಮುಂದಾಗಿದ್ದು, ಇದಕ್ಕಾಗಿ 4,400 ಕೋಟಿ ರೂ.ಮೀಸಲಿಡಲಾಗಿದೆ. ಸ್ಥಗಿತಗೊಂಡ ಉಷ್ಣ ವಿದ್ಯುತ್ ಸ್ಥಾವರಗಳ ಭೂಮಿಯನ್ನು ಪರ್ಯಾಯ ಉದ್ದೇಶಗಳಿಗಾಗಿ ಬಳಸಬಹುದು. ನಿಗದಿತ ಮಟ್ಟಕ್ಕಿಂತ ಹೆಚ್ಚು ಹೊರಸೂಸುವ ಎಲ್ಲಾ ಉಷ್ಣ ವಿದ್ಯುತ್ ಸ್ಥಾವರಗಳನ್ನು ಮುಚ್ಚಬಹುದು ಎಂದರು.

ABOUT THE AUTHOR

...view details