ಚೆನ್ನೈ:ಕೊರೊನಾ ವೈರಸ್ ತಡೆಗಟ್ಟಲು ವಿಧಿಸಲಾಗಿರುವ ಕಠಿಣ ಲಾಕ್ಡೌನ್ ಕ್ರಮಗಳಿಂದ ಬಹುತೇಕ ಬಡಜನತೆ ಆದಾಯವಿಲ್ಲದೆ ಬಾಧಿತರಾಗಿರುವುದನ್ನು ಪರಿಗಣಿಸಿರುವ ತಮಿಳುನಾಡು ಸರ್ಕಾರ, ರಾಜ್ಯದ ಎಲ್ಲ ಪಡಿತರ ಚೀಟಿದಾರರಿಗೆ ಸಾವಿರ ರೂ. ನಗದು, ಸಹಾಯ ಧನ, ಉಚಿತ ಅಕ್ಕಿ, ಸಕ್ಕರೆ ವಿತರಿಸಲು ಮುಂದಾಗಿದೆ. ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸಾಮಿ ಮಂಗಳವಾರ ಈ ವಿಷಯ ತಿಳಿಸಿದರು.
ಜನರಿಗೆ 1,000 ರೂಪಾಯಿ ಸಹಾಯ ಧನ, ಉಚಿತ ದಿನಸಿ: ತಮಿಳುನಾಡು ಸರ್ಕಾರ ನಿರ್ಧಾರ - ಪಡಿತರ ಚೀಟಿದಾರರಿಗೆ ಸಾವಿರ ರೂ.
ಕೊರೊನಾ ಬಿಕ್ಕಟ್ಟಿನಿಂದ ಬಾಧಿತ ಜನರ ನೆರವಿಗೆ ಮುಂದಾಗಿರುವ ತಮಿಳುನಾಡು ಸರ್ಕಾರ ಪಡಿತರ ಚೀಟಿದಾರರಿಗೆ ಸಹಾಯ ಧನ, ಅಕ್ಕಿ ಹಾಗು ಸಕ್ಕರೆ ವಿತರಿಸಲು ಮುಂದಾಗಿದೆ.

ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸಾಮಿ
ಮಾರ್ಚ್ ತಿಂಗಳ ಪಡಿತರ ಈವರೆಗೂ ಪಡೆಯದೇ ಇದ್ದವರು ಅದನ್ನು ಏಪ್ರಿಲ್ ತಿಂಗಳಲ್ಲಿ ಪಡೆದುಕೊಳ್ಳಬಹುದು ಎಂದು ಅವರು ಹೇಳಿದರು.
ರಾಜ್ಯದಲ್ಲಿನ ಹಿರಿಯ ನಾಗರಿಕರಿಗೆ ಅಂಗನವಾಡಿಗಳಲ್ಲಿ ಉಚಿತವಾಗಿ ಊಟ ನೀಡಲಾಗುವುದು. ಅಂಗನವಾಡಿ ಕೇಂದ್ರದವರೆಗೂ ನಡೆದು ಬರಲಾಗದ ವೃದ್ಧರಿಗೆ ಅವರ ಮನೆಗೇ ಆಹಾರ ಪೂರೈಸಲಾಗುವುದು. ಬೀದಿ ಬದಿ ಮಾರಾಟಗಾರರು, ಆಟೊ ರಿಕ್ಷಾ ಚಾಲಕರಿಗೆ ಹೆಚ್ಚುವರಿ ಸಾವಿರ ರೂಪಾಯಿ ನೀಡಲಾಗುವುದು. ಹಾಗೆಯೇ ಆಟೊ ಚಾಲಕರಿಗೆ 1 ಕೆಜಿ ಎಣ್ಣೆ, 1 ಕೆಜಿ ಅಕ್ಕಿ ವಿತರಿಸಲಾಗುವುದು ಎಂದು ಪಳನಿಸಾಮಿ ತಿಳಿಸಿದರು.