ನವದೆಹಲಿ:ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಮುಕ್ತಾಯವಾಗಿದ್ದು, ಇನ್ನೂ ಆರು ಹಂತಗಳು ಬಾಕಿ ಇದೆ. ಚುನಾವಣಾ ದಿನಾಂಕ ಘೋಷಣೆಯಾದ ಬಳಿಕ ಅಕ್ರಮವಾಗಿ ಹಣವನ್ನು ಸಾಗಿಸುವ ಕಾರ್ಯ ಎಗ್ಗಿಲ್ಲದೆ ನಡೆಯುತ್ತಿದೆ.
ಲೋಕಸಮರದಲ್ಲಿ ಕಾಂಚಾಣದ ಕುಣಿತ.. ಜಪ್ತಿಯಾದ ಸರಕಿನ ಮೌಲ್ಯ 2014ಕ್ಕಿಂತ ಎರಡು ಪಟ್ಟು ಹೆಚ್ಚಳ! - ನವದೆಹಲಿ
ಮಾಹಿತಿಯ ಪ್ರಕಾರ ಪ್ರತಿನಿತ್ಯ ಅಧಿಕಾರಿಗಳು ಸುಮಾರು ನೂರು ಕೋಟಿ ನಗದು ಹಾಗೂ ಇನ್ನಿತರ ಸರಕುಗಳನ್ನು ಜಪ್ತಿ ಮಾಡುತ್ತಿದ್ದಾರೆ. ಈವರೆಗೆ ಜಪ್ತಿಯಾದ ಹಣ, ಮದ್ಯ, ಚಿನ್ನ ಹಾಗೂ ಇತರೆ ಸರಕುಗಳ ಒಟ್ಟಾರೆ ಮೌಲ್ಯ 2,500 ಕೋಟಿ ಎಂದು ಅಂದಾಜಿಸಲಾಗಿದೆ.
ಮಾಹಿತಿಯ ಪ್ರಕಾರ ಪ್ರತಿನಿತ್ಯ ಅಧಿಕಾರಿಗಳು ಸುಮಾರು ನೂರು ಕೋಟಿ ನಗದು ಹಾಗೂ ಇನ್ನಿತರ ಸರಕುಗಳನ್ನು ಜಪ್ತಿ ಮಾಡುತ್ತಿದ್ದಾರೆ. ಈವರೆಗೆ ಜಪ್ತಿಯಾದ ಹಣ, ಮದ್ಯ, ಚಿನ್ನ ಹಾಗೂ ಇತರೇ ಸರಕುಗಳ ಒಟ್ಟಾರೆ ಮೌಲ್ಯ 2,500 ಕೋಟಿ ಎಂದು ಅಂದಾಜಿಸಲಾಗಿದೆ. ಇದು 2014ರ ಲೋಕಸಭಾ ಚುನಾವಣೆಯಲ್ಲಿ ವಶಪಡಿಸಿಕೊಳ್ಳಲಾದ ಮೌಲ್ಯಕ್ಕಿಂತ ಎರಡು ಪಟ್ಟು ಹೆಚ್ಚಳ.ಏರ್ಪೋರ್ಟ್, ಹೆದ್ದಾರಿ, ರೈಲ್ವೇ ನಿಲ್ದಾಣ, ಹೋಟೆಲ್ ಹಾಗೂ ಇನ್ನಿತರ ಪ್ರಮುಖ ಸ್ಥಳಗಳಲ್ಲಿ ಅಧಿಕಾರಿಗಳು ದಾಳಿ ನಡೆಸಿ ಕೋಟಿ ಕೋಟಿ ಹಣವನ್ನು ಜಪ್ತಿ ಮಾಡುತ್ತಿದ್ದಾರೆ.
ಅಧಿಕೃತ ಮಾಹಿತಿಯ ಪ್ರಕಾರ 2014ರ ಲೋಕಸಭಾ ಚುನಾವಣೆಯಲ್ಲಿ ಅಧಿಕಾರಿಗಳು 1,200 ಕೋಟಿ ಮೌಲ್ಯದ ನಗದು ಹಾಗೂ ಇನ್ನಿತರ ಸರಕನ್ನು ವಶಪಡಿಸಿಕೊಂಡಿದ್ದರು. ಆದರೆ, ಈ ಪ್ರಮಾಣ ಈಗಾಗಲೇ ದುಪ್ಪಟ್ಟಾಗಿದ್ದು, ಇದು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.