ಕರ್ನಾಟಕ

karnataka

ETV Bharat / bharat

ಉದ್ಯಮಿಯೊಬ್ಬರ ಕಾರಿನಲ್ಲಿ ಸಿಕ್ಕಿತು ಬರೋಬ್ಬರಿ ___ಇಷ್ಟು ಕೋಟಿ ನಗದು! - Raipur

ಸೂಕ್ತ ದಾಖಲೆಗಳಿಲ್ಲದೇ ಉದ್ಯಮಿಯೊಬ್ಬರ ಒಡೆತನದ ಕಾರಿನಲ್ಲಿ ಸಾಗಿಸುತ್ತಿದ್ದ ₹ 1.12 ಕೋಟಿ ನಗದನ್ನು ಛತ್ತೀಸ್​​ಗಢದ ಮಹಾಸಮುಂಡ್​ ಪೊಲೀಸರು ಜಪ್ತಿ ಮಾಡಿದ್ದಾರೆ.

Rs 1 crore unaccounted cash seized in Chhattisgarh, 2 held
ಹಣ

By

Published : Jun 11, 2020, 2:32 PM IST

ರಾಯ್‌ಪುರ (ಛತ್ತೀಸ್​ಗಢ): ಸೂಕ್ತ ದಾಖಲೆಗಳಿಲ್ಲದೇ ಒಡಿಶಾ ಮೂಲದ ಉದ್ಯಮಿಯೊಬ್ಬರ ಒಡೆತನದ ಕಾರಿನಲ್ಲಿ ಸಾಗಿಸುತ್ತಿದ್ದ ₹ 1.12 ಕೋಟಿ ಮೌಲ್ಯದ ನಗದನ್ನು ಛತ್ತೀಸ್​​ಗಢ ಪೊಲೀಸರು ಗುರುವಾರ ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ.

ಒಡಿಶಾದ ಬಾರ್‌ಗ್ರಾದಿಂದ ಇಬ್ಬರು ರಾಯ್‌ಪುರಕ್ಕೆ ಕಾರಿನಲ್ಲಿ ಬರುತ್ತಿದ್ದರು. ಅನುಮಾನಾಸ್ಪದವಾಗಿ ಕಂಡು ಬಂದ ಪರಿಣಾಮ ರಾಜ್ಯದ ಮಹಾ ಸಮುಂಡ್ ಜಿಲ್ಲೆಯ ಪೊಲೀಸರು ಕಾರು ಪರಿಶೀಲನೆ ನಡೆಸಿದರು. ಆಗ 1 ಕೋಟಿ, 12 ಲಕ್ಷದ 99 ಸಾವಿರ ರೂ. ನಗದು ಇರುವುದು ಗೊತ್ತಾಗಿದೆ. ಅದಕ್ಕೆ ಸೂಕ್ತ ದಾಖಲೆಗಳು ಇಲ್ಲದ ಕಾರಣ ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅವರ ವ್ಯಾಪಾರಕ್ಕೆ ಸಂಬಂಧಿಸಿದ ವ್ಯಕ್ತಿಗಳಿಗೆ ಹಣ ನೀಡುವ ಸಲುವಾಗಿ ಇಬ್ಬರು ರಾಯಪುರಕ್ಕೆ ಪ್ರಯಾಣ ಬೆಳೆಸಿದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಆದರೆ, ಸಂಪೂರ್ಣ ತನಿಖೆ ನಡೆಯುತ್ತಿದೆ. ಇದಲ್ಲದೇ, ಸಿಆರ್​​ಪಿಸಿ ಸೆಕ್ಷನ್ 102ರ ಅಡಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣವನ್ನು ಎಸ್‌ಐಟಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಪ್ರಫುಲ್ಲ ಕುಮಾರ್ ಠಾಕೂರ್ ತಿಳಿಸಿದ್ದಾರೆ.

ABOUT THE AUTHOR

...view details