ಕರ್ನಾಟಕ

karnataka

ETV Bharat / bharat

ರಾಮ್​ ಚರಣ್​ ಜನ್ಮ ದಿನದ ಅಂಗವಾಗಿ ಆರ್​ಆರ್​ಆರ್​ ಟೀಸರ್​​ ಬಿಡುಗಡೆ.. - ಆರ್​ಆರ್​ಆರ್​ ಟೀಸರ್​​

ಆರ್​ಆರ್​ಆರ್​ ಚಿತ್ರ ತಂಡ ರಾಮ್​ ಚರಣ್​​ ಅವರ ಜನ್ಮ ದಿನದ ಅಂಗವಾಗಿ ಸಿನಿಮಾದ ಟೀಸರ್​ ಬಿಡುಗಡೆ ಮಾಡಿದೆ. ನಿರ್ದೇಶಕ ಎಸ್ ಎಸ್ ರಾಜಮೌಳಿ ತಮ್ಮ ಟ್ವಿಟರ್​ನಲ್ಲಿ ಈ ಟೀಸರ್​ ಹಂಚಿಕೊಂಡಿದ್ದಾರೆ.

ರಾಮ್​ ಚರಣ್​ ಜನ್ಮ ದಿನದ ಅಂಗವಾಗಿ ಆರ್​ಆರ್​ಆರ್​ ಟೀಸರ್​​ ಬಿಡುಗಡೆ
ರಾಮ್​ ಚರಣ್​ ಜನ್ಮ ದಿನದ ಅಂಗವಾಗಿ ಆರ್​ಆರ್​ಆರ್​ ಟೀಸರ್​​ ಬಿಡುಗಡೆ

By

Published : Mar 27, 2020, 9:02 PM IST

ಚೆನ್ನೈ: ರಾಮ್​ ಚರಣ್​ ತೇಜ ಅವರ ಜನ್ಮ ದಿನದ ಅಂಗವಾಗಿ ಆರ್​ಆರ್​ಆರ್​ ಚಿತ್ರ ತಂಡ ವಿಶೇಸ ಟೀಸರ್​​ ಬಿಡುಗಡೆ ಮಾಡಿದೆ. ಇದರಲ್ಲಿ ಸೂಪರ್​ ಸ್ಟಾರ್​ ರಾಮ್​ ಚರಣ್​​ ರೌಡಿ ಅವತಾರದಲ್ಲಿ ಕಾಣಿಸಿದ್ದಾರೆ.

ರಾಮ್​ ಚರಣ್​ ಜನ್ಮ ದಿನದ ಅಂಗವಾಗಿ ಆರ್​ಆರ್​ಆರ್​ ಟೀಸರ್​​ ಬಿಡುಗಡೆ

ನಿರ್ದೇಶಕ ಎಸ್ ಎಸ್‌ ರಾಜಮೌಳಿ ತಮ್ಮ ಟ್ವಿಟರ್​ನಲ್ಲಿ ಟೀಸರ್​ ಹಂಚಿಕೊಂಡಿದ್ದಾರೆ. "ನನ್ನ ರಾಮರಾಜು lAlwaysRamCharan ಅವರನ್ನ ಉತ್ತಮ ರೀತಿಯಲ್ಲಿ ವರ್ಣಿಸುವವರು ಯಾರಾದರೂ ಇದ್ದರೆ, ಅದು ನನ್ನ ಭೀಮ್ @ tarak9999 ಆಗಿರಬಹುದು. ಇಲ್ಲಿ ನಾವು ನಿಮಗೆ ರಾಮರಾಜು ಅವರನ್ನು ಪರಿಚಯಿಸುತ್ತಿದ್ದೇವೆ" ಎಂದು ಬರೆದುಕೊಂಡಿದ್ದಾರೆ.

ವಿಡಿಯೋದಲ್ಲಿ ರಾಮ್ ಚರಣ್ ಅವರನ್ನು ಅಲ್ಲೂರಿ ಸೀತಾರಾಮರಾಜು ಆಗಿ ತೋರಿಸಲಾಗಿದೆ. ಇದರಿಂದ ಅವರು ಪೊಲೀಸ್​ ಅಧಿಕಾರಿಯಾಗಿ ಪಾತ್ರ ಮಾಡುತ್ತಿದ್ದಾರೆ ಎಂಬುದು ತಿಳಿಯುತ್ತದೆ. ಮೊದಲಿಗೆ ಜ್ಯೂ. ಎನ್​ಟಿಆರ್​ ಅವರ ಧ್ವನಿಯ ಮೂಲಕ ಪಾತ್ರವನ್ನು ಪರಿಚಯಿಸಲಾಗುತ್ತದೆ. ಅವನು ಬೆಂಕಿಯಂತೆ, ಸಾವು ಸಹ ಅವನಿಗೆ ಹೆದರುತ್ತದೆ. ಜೀವನ ಹಾಗೂ ಗುಂಡುಗಳು ಆತನಿಗೆ ಶರಣಾಗುತ್ತವೆ ಎಂದು ಹೇಳಲಾಗುತ್ತದೆ.

ಈ ಚಿತ್ರವು ಜೂನಿಯರ್ ಎನ್‌ಟಿಆರ್ ಮತ್ತು ರಾಮ್ ಚರಣ್‌ರನ್ನು ಆಧುನಿಕ ಯುಗದಲ್ಲಿ ಸಹೋದರನಂತೆ ಚಿತ್ರಿಸಲಿದ್ದು, ಅವರು ವಿಭಿನ್ನ ಯುಗದ ಫ್ಲ್ಯಾಷ್‌ಬ್ಯಾಕ್‌ನಲ್ಲಿ ಬಂಡುಕೋರರಾದ ​​ಕೋಮರಾಮ್ ಭೀಮ್ ಮತ್ತು ಅಲ್ಲೂರಿ ಸೀತಾರಾಮರಾಜುಯಿನ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಆರ್‌ಆರ್‌ಆರ್‌ನ ಡಿವಿವಿ ಎಂಟರ್‌ಟೈನ್‌ಮೆಂಟ್ ಬ್ಯಾನರ್‌ನಲ್ಲಿ ಡಿವಿವಿ ದಾನಯ್ಯ ನಿರ್ಮಿಸುತ್ತಿದ್ದಾರೆ. 2021ರ ಜನವರಿ 8 ರಂದು 10 ಭಾಷೆಗಳಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ.

ABOUT THE AUTHOR

...view details