ಥಾಣೆ(ಮಹಾರಾಷ್ಟ್ರ):ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಯತ್ನಿಸಿದ ವ್ಯಕ್ತಿ ಹಿಡಿತ ಸಿಗದೆ ರೈಲಿನಡಿ ಬೀಳುವ ವೇಳೆ ಸ್ಥಳದಲ್ಲಿದ್ದ ಆರ್ಪಿಎಫ್ ಸಿಬ್ಬಂದಿ ಆತನನ್ನ ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.
ಚಲುಸುತ್ತಿದ್ದ ರೈಲಿನಿಂದ ಇಳಿಯಲು ಯತ್ನಿಸಿದ ವ್ಯಕ್ತಿ.. ಪ್ರಾಣಾಪಾಯದಿಂದ ಪಾರು ಮಾಡಿದ ಆರ್ಪಿಎಫ್ ಸಿಬ್ಬಂದಿ - ಕಲ್ಯಾಣಿ ರೈಲು ನಿಲ್ದಾಣದಲ್ಲಿ ಚಲಿಸುತ್ತಿದ್ದ ರೈಲಿನಿಂದ ವ್ಯಕ್ತಿಯೋರ್ವ ಇಳಿಯಲು ಯತ್ನ
ರೈಲಿನಿಂದ ಇಳಿಯುತ್ತಿರುವಾಗ ಪ್ರಾಣಾಪಾಯಕ್ಕೀಡಾದ ವೇಳೆ ಆರ್ಪಿಎಫ್ ಸಿಬ್ಬಂದಿ ಆತನನ್ನು ರಕ್ಷಿಸಿರುವುದು ಕಲ್ಯಾಣಿ ರೈಲ್ವೆ ನಿಲ್ದಾಣದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ..
ಥಾಣೆ ಜಿಲ್ಲೆಯ ಕಲ್ಯಾಣಿ ರೈಲ್ವೆ ನಿಲ್ದಾಣದಲ್ಲಿ 52 ವರ್ಷದ ವ್ಯಕ್ತಿಯೋರ್ವ ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಪ್ರಯತ್ನಿಸುತ್ತಿದ್ದಾಗ, ಆಯ ತಪ್ಪಿ ರೈಲಿನ ಕೆಳಗೆ ಬೀಳುತ್ತಿದ್ದರು. ಇದನ್ನು ಗಮನಿಸಿ ಸ್ಥಳದಲ್ಲಿದ್ದ ಮಹಾರಾಷ್ಟ್ರ ಸೆಕ್ಯುರಿಟಿ ಫೋರ್ಸ್ (ಎಂಎಸ್ಎಫ್) ಸಿಬ್ಬಂದಿ, ಕೆ.ಸಾಹು ಮತ್ತು ಆರ್ಪಿಎಫ್ ಸಿಬ್ಬಂದಿ ಸೋಮನಾಥ್ ಮಹಾಜನ್, ಕೂಡಲೇ ಅವರ ಕೈ ಹಿಡಿದು ವ್ಯಕ್ತಿಯ ಪ್ರಾಣ ರಕ್ಷಿಸಿದ್ದಾರೆ.
ರೈಲು ವೇಗವಾಗಿ ಚಲಿಸುತ್ತಿರುವುದು ಹಾಗೂ ಈ ವೇಳೆ ವ್ಯಕ್ತಿ ರೈಲಿನಿಂದ ಇಳಿಯುತ್ತಿರುವಾಗ ಪ್ರಾಣಾಪಾಯಕ್ಕೀಡಾದ ವೇಳೆ ಆರ್ಪಿಎಫ್ ಸಿಬ್ಬಂದಿ ಆತನನ್ನು ರಕ್ಷಿಸಿರುವುದು ಕಲ್ಯಾಣಿ ರೈಲ್ವೆ ನಿಲ್ದಾಣದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.