ಅಹಮದಾಬಾದ್: ಚಲಿಸುತ್ತಿದ್ದ ರೈಲನ್ನು ಹತ್ತಲು ಹೋಗಿ ಆಯತಪ್ಪಿ ಹಳಿಗೆ ಬೀಳುತ್ತಿದ್ದ ಮಹಿಳಾ ಪ್ರಯಾಣಿಕೆಯನ್ನು ರೈಲ್ವೆ ಭದ್ರತಾ ಸಿಬ್ಬಂದಿ ಬದುಕಿಸಿದ ಘಟನೆ ಗುಜರಾತ್ನ ಅಹಮದಾಬಾದ್ ರೈಲ್ವೆ ಸ್ಟೇಷನ್ನಲ್ಲಿ ನಡೆದಿದೆ.
ರೈಲು ಹತ್ತಲು ಹೋಗಿ ಹಳಿಗೆ ಬೀಳುತ್ತಿದ್ದ ಮಹಿಳೆಯ ರಕ್ಷಣೆ: ವಿಡಿಯೋ - ಮಹಿಳಾ ಪ್ರಯಾಣಿಕೆ
ಮಹಿಳಾ ಪ್ರಯಾಣಿಕೆಯೋರ್ವಳು ರೈಲು ಹತ್ತಲು ಹೋಗಿ ಆಯತಪ್ಪಿ ಕೆಳಗೆ ಬೀಳುತ್ತಿದ್ದ ವೇಳೆ ಪ್ಲಾಟ್ಫಾರ್ಮ್ನಲ್ಲಿದ್ದ ಆರ್‌ಪಿಎಫ್ ಸಿಬ್ಬಂದಿ ರಕ್ಷಣೆ ಮಾಡಿರುವ ಘಟನೆ ನಡೆದಿದೆ.
ಪೊಲೀಸಪ್ಪನಿಗೊಂದು ಸೆಲ್ಯೂಟ್
ಪ್ಲಾಟ್‌ಫಾರ್ಮ್‌ನಿಂದ ರೈಲು ಚಲಿಸುತ್ತಿದ್ದ ವೇಳೆ ಮಹಿಳೆ ರೈಲು ಹತ್ತಲು ಮುಂದಾಗಿದ್ದಾಳೆ. ಈ ವೇಳೆ ಕಾಲುಜಾರಿ ಹಳಿಗೆ ಬೀಳುತ್ತಿದ್ದಂತೆ ರೈಲ್ವೆ ಭದ್ರತಾ ಪೊಲೀಸ್ ಓಡಿಹೋಗಿ ಆಕೆಯನ್ನು ಬಚಾವ್ ಮಾಡಿದ್ರು. ಈ ವಿಡಿಯೋ ವೈರಲ್ ಆಗಿದೆ.
ರೈಲು ಹತ್ತುವಾಗ ಮತ್ತು ಇಳಿಯವಾಗ ಸಾಕಷ್ಟು ಜಾಗ್ರತೆ ವಹಿಸುವಂತೆ ರೈಲ್ವೆ ಇಲಾಖೆ ಸೂಚನೆ ನೀಡುತ್ತಿದ್ದರೂ, ಇಂತಹ ಅಪಾಯಕಾರಿ ಘಟನೆಗಳು ನಡೆಯುತ್ತಿವೆ. ಈ ಹಿಂದೆಯೂ ಇಂತಹ ಘಟನೆಗಳು ನಡೆದಿದ್ದು, ಆರ್‌ಪಿಎಫ್ ಸಿಬ್ಬಂದಿ ಪ್ರಯಾಣಿಕರನ್ನು ರಕ್ಷಣೆ ಮಾಡಿರುವ ಸಾಕಷ್ಟು ನಿದರ್ಶನಗಳಿವೆ.
Last Updated : Jul 12, 2019, 7:08 PM IST