ಹೈದರಾಬಾದ್: ಮನೆಯ ಛಾವಣಿ ಕುಸಿದು ಐವರು ಮಹಿಳೆಯರು ಮೃತಪಟ್ಟು, ಇಬ್ಬರು ಗಾಯಗೊಂಡಿರುವ ಘಟನೆ ತೆಲಂಗಾಣದ ವನಪರ್ಥಿಯಲ್ಲಿ ನಡೆದಿದೆ.
ಮನೆಯ ಛಾವಣಿ ಕುಸಿದು ಐವರು ಮಹಿಳೆಯರು ದುರ್ಮರಣ: ಇಬ್ಬರಿಗೆ ಗಾಯ - ತೆಲಂಗಾಣದಲ್ಲಿ ಮನೆಯ ಛಾವಣಿ ಕುಸಿತ
ಮಳೆಯಿಂದ ತೇವಗೊಂಡಿದ್ದ ಮನೆಯ ಛಾವಣಿ ಕುಸಿದು ಐವರು ಮಹಿಳೆಯರು ಮೃತಪಟ್ಟ ಘಟನೆ ತೆಲಂಗಾಣದಲ್ಲಿ ನಡೆದಿದೆ.
![ಮನೆಯ ಛಾವಣಿ ಕುಸಿದು ಐವರು ಮಹಿಳೆಯರು ದುರ್ಮರಣ: ಇಬ್ಬರಿಗೆ ಗಾಯ Five women die as roof of house collapses in Telangan](https://etvbharatimages.akamaized.net/etvbharat/prod-images/768-512-9304555-thumbnail-3x2-hrs.jpg)
ಕುಸಿದಿರುವ ಮನೆಯ ಛಾವಣಿ
ವನಪರ್ಥಿಯ ಗೋಪಾಲಪೇಟ ಮಂಡಲದ ಬುದ್ಧರಾಮ್ ಬಳಿ ಈ ಅವಘಡ ಸಂಭವಿಸಿದೆ. ಘಟನೆ ನಡೆಯುವಾಗ ಮನೆಯೊಳಗೆ 11 ಜನ ನಿದ್ದೆ ಮಾಡುತ್ತಿದ್ದರು.
ಕುಸಿದಿರುವ ಮನೆಯ ಛಾವಣಿ
ಕಳೆದ ವರ್ಷ ನಿಧನರಾದ ಮನೆಯ ಹಿರಿಯ ವ್ಯಕ್ತಿಯ ಪುಣ್ಯಸ್ಮರಣೆ ಮಾಡಲು ಕುಟುಂಬಸ್ಥರೆಲ್ಲ ಸೇರಿದ್ದರು. ಸತತವಾಗಿ ಸುರಿದ ಮಳೆಯಿಂದ ಮನೆಯ ಛಾವಣಿ ತೇವಗೊಂಡು ಕುಸಿದಿದೆ. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮಸ್ಥರ ಸಹಾಯದೊಂದಿಗೆ ಪೊಲೀಸರು ಅವಶೇಷಗಳಡಿ ಸಿಲುಕಿದ್ದ ಮೃತದೇಹಗಳನ್ನು ಹೊರತೆಗೆದಿದ್ದಾರೆ.