ಕರ್ನಾಟಕ

karnataka

ETV Bharat / bharat

ಮನಾಲಿ-ಲೇಹ್ ನಡುವಿನ ರೋಹ್ಟಂಗ್​ ಪಾಸ್ ಸಾರ್ವಜನಿಕರ ಸಂಚಾರಕ್ಕೆ ಮುಕ್ತ: ಕೃಷಿಕರಿಗೆ ಅನುಕೂಲ

ಹಿಮಾಚಲದ ಲಾಹೌಲ್ ಕಣಿವೆಯ ಜನರಿಗೆ ಕೃಷಿ ಕೆಲಸ ಪ್ರಾರಂಭಿಸಲು ಅನುಕೂಲ ಮಾಡಿಕೊಡುವ ಮನಾಲಿ-ಲೇಹ್ ನಡುವಿನ 27 ಕಿ.ಮೀ ದೂರದ ಕಣಿವೆ ಮಾರ್ಗ ರೋಹ್ಟಂಗ್​ ಪಾಸ್ಅ​ನ್ನು ಗಡಿ ರಸ್ತೆಗಳ ಅಭಿವೃದ್ಧಿ ಸಂಸ್ಥೆ (ಬಿಆರ್​ಒ) ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಿದೆ.

Rohtang Pass opened for public, will facilitate movement of Lahaul Valley locals: Rajnath Singh
Rohtang Pass opened for public, will facilitate movement of Lahaul Valley locals: Rajnath Singh

By

Published : Apr 26, 2020, 12:08 PM IST

ರೋಹ್ತಾಂಗ್ (ಹಿಮಾಚಲ ಪ್ರದೇಶ ) : ಮನಾಲಿ-ಲೇಹ್ ನಡುವಿನ 27 ಕಿ.ಮೀ ದೂರದ ಕಣಿವೆ ಮಾರ್ಗ ರೋಹ್ಟಂಗ್​ ಪಾಸ್​ಅನ್ನು ಗಡಿ ರಸ್ತೆಗಳ ಅಭಿವೃದ್ಧಿ ಸಂಸ್ಥೆ (ಬಿಆರ್​ಒ) ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಿದೆ. ಈ ರಸ್ತೆಯು ಲಾಹೌಲ್ ಕಣಿವೆಯ ಜನರು ತಮ್ಮ ಜಮೀನಿಗೆ ತೆರಳಿ ಕೃಷಿ ಕೆಲಸದಲ್ಲಿ ತೊಡಗಲು ಅನುಕೂಲ ಮಾಡಿಕೊಡಲಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಮನಾಲಿ - ಲೇಹ್ ಮಾರ್ಗದಲ್ಲಿರುವ ರೋಹ್ಟಂಗ್​ ಪಾಸ್ಅ​ನ್ನು ಸಾರ್ವಜನಿಕರಿಗಾಗಿ ತೆರೆಯಲಾಗಿದೆ. ಇದು ಹಿಮಾಚಲದ ಲಾಹೌಲ್ ಕಣಿವೆಯ ಜನರಿಗೆ ಕೃಷಿ ಕೆಲಸ ಪ್ರಾರಂಭಿಸಲು ಅನುಕೂಲ ಮಾಡಿಕೊಟ್ಟಿದೆ. ಇದಕ್ಕಾಗಿ ಗಡಿ ರಸ್ತೆಗಳ ಅಭಿವೃದ್ಧಿ ಸಂಸ್ಥೆ (ಬಿಆರ್​ಗೆ)ಯನ್ನು ನಾನು ಅಭಿನಂದಿಸುತ್ತೇನೆ ಎಂದಿದ್ದಾರೆ.

ABOUT THE AUTHOR

...view details