ಕರ್ನಾಟಕ

karnataka

ETV Bharat / bharat

ಟೆಸ್ಟ್​​ನಲ್ಲಿ ಓಪನರ್​ ಆಗಿ ಕಣಕ್ಕಿಳಿಸಿದ್ದಕ್ಕಾಗಿ ಅವರಿಬ್ಬರಿಗೂ ನಾನು ಋಣಿ: ರೋಹಿತ್​​

ಟೆಸ್ಟ್​​ ಕ್ರಿಕೆಟ್​​ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ಏನು ನೀಡದ ರೋಹಿತ್​ ಶರ್ಮಾ ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದಂತೆ ರನ್​ ಮಳೆ ಹರಿಸಿದ್ದು, ಅದಕ್ಕಾಗಿ ತಂಡದ ಇಬ್ಬರು ಸದಸ್ಯರಿಗೆ ಧನ್ಯವಾದ ಹೇಳಿದ್ದಾರೆ.

ರೋಹಿತ್​ ಶರ್ಮಾ

By

Published : Oct 22, 2019, 5:18 PM IST

ರಾಂಚಿ:ಇಷ್ಟು ದಿನ ಏಕದಿನ ಹಾಗೂ ಟಿ-20 ಕ್ರಿಕೆಟ್​​ನಲ್ಲಿ ಮಾತ್ರ ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದ ಹಿಟ್​​ಮ್ಯಾನ್​ ರೋಹಿತ್​ ಶರ್ಮಾ ಇದೀಗ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಆರಂಭಿಕರಾಗಿ ಕಣಕ್ಕಿಳಿದು ಅಬ್ಬರಿಸಿದ್ದಾರೆ.

ಈ ಹಿಂದೆ ಟೆಸ್ಟ್​​ ಪಂದ್ಯಗಳಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್​ ಬೀಸುತ್ತಿದ್ದ ರೋಹಿತ್​ ಶರ್ಮಾ ಹೇಳಿಕೊಳ್ಳುವಂತಹ ಪ್ರದರ್ಶನವನ್ನೇನೂ ನೀಡಿರಲಿಲ್ಲ. ಆದರೆ ಈ ಸರಣಿಯಲ್ಲಿ ದ್ವಿಶತಕ ಸೇರಿದಂತೆ ಎರಡು ಶತಕ ಸಹ ಸಿಡಿಸಿ ಮಿಂಚಿದ್ದಾರೆ.

ರೋಹಿತ್​ ಶರ್ಮಾ (ಕೃಪೆ: ಸ್ಟಾರ್​ ಸ್ಪೋರ್ಟ್ಸ್​​​)

ಮೂರು ಟೆಸ್ಟ್​​ ಪಂದ್ಯಗಳಿಂದ ಶತಕ, ದ್ವಿಶತಕ ಸೇರಿದಂತೆ ಬರೋಬ್ಬರಿ 529ರನ್​ಗಳಿಕೆ ಮಾಡಿರುವ ರೋಹಿತ್​ ಶರ್ಮಾ ಅನೇಕ ದಾಖಲೆ ತಮ್ಮ ಹೆಸರಿಗೆ ಬರೆಯಿಸಿಕೊಂಡಿದ್ದಾರೆ. ಇದೀಗ ಹರಿಣಗಳ ವಿರುದ್ಧದ ಟೆಸ್ಟ್​​ ಸರಣಿ ಮುಕ್ತಾಯಗೊಳ್ಳುತ್ತಿದ್ದಂತೆ ತಮ್ಮ ಟೆಸ್ಟ್​ ಕ್ರಿಕೆಟ್​​ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿಸಿದ್ದಕ್ಕಾಗಿ ಇಬ್ಬರಿಗೆ ಧನ್ಯವಾದ ಹೇಳಿದ್ದಾರೆ.

ಟೀಂ ಇಂಡಿಯಾ ಕ್ಯಾಪ್ಟನ್​ ವಿರಾಟ್​​​ ಕೊಹ್ಲಿ ಹಾಗೂ ತಂಡದ ಮುಖ್ಯ ಕೋಚ್​ ರವಿಶಾಸ್ತ್ರಿಗೆ ರೋಹಿತ್​ ಶರ್ಮಾ ಧನ್ಯವಾದ ಹೇಳಿದ್ದು, ತಂಡದ ಮ್ಯಾನೇಜ್​ಮೆಂಟ್​ಗೂ ಆಭಾರಿಯಾಗಿರುವೆ ಎಂದು​ ಹೇಳಿದ್ದಾರೆ. ಈ ಮೂಲಕ ರೋಹಿತ್​​-ವಿರಾಟ್​​ ಕೊಹ್ಲಿ ನಡುವೆ ಎಲ್ಲವೂ ಸರಿಯಿಲ್ಲ ಎಂದು ಗಾಸಿಪ್​ ಸುದ್ದಿ ಹರಿಡಿಸುತ್ತಿದ್ದವರಿಗೂ ಹಿಟ್​ಮ್ಯಾನ್​​ ತಿರುಗೇಟು ನೀಡಿದ್ದಾರೆ.

ABOUT THE AUTHOR

...view details