ನವೆದೆಹಲಿ: ನಟಿ, ಮಾಜಿ ಸಂಸದೆ ರಮ್ಯಾ ಅವರು ರಾಜಕೀಯದಿಂದ ದೂರ ಉಳಿದಿರುವ ಕಾರಣ ಅವರು ಉಸ್ತುವಾರಿ ವಹಿಸಿಕೊಂಡಿದ್ದ ಎಐಸಿಸಿ ಸಾಮಾಜಿಕ ಜಾಲತಾಣ ವಿಭಾಗಕ್ಕೆ ಹೊಸ ವ್ಯಕ್ತಿಯನ್ನು ನೇಮಕ ಮಾಡಲಾಗಿದೆ.
ಸೊಶಿಯಲ್ ಮೀಡಿಯಾ ಮುಖ್ಯಸ್ಥೆ ಸ್ಥಾನದಿಂದ ರಮ್ಯಾ ಔಟ್: ರೋಹನ್ ಗುಪ್ತಾ ನೇಮಕ ಮಾಡಿದ 'ಕೈ'! - ಮಾಜಿ ಸಂಸದೆ ರಮ್ಯಾ
ನಟಿ, ಮಾಜಿ ಸಂಸದೆ ರಮ್ಯಾ ಅವರು ರಾಜಕೀಯದಿಂದ ದೂರ ಉಳಿದಿರುವ ಕಾರಣ ಅವರು ಉಸ್ತುವಾರಿ ವಹಿಸಿಕೊಂಡಿದ್ದ ಎಐಸಿಸಿ ಸಾಮಾಜಿಕ ಜಾಲತಾಣ ವಿಭಾಗಕ್ಕೆ ಹೊಸ ವ್ಯಕ್ತಿಯನ್ನು ನೇಮಕ ಮಾಡಲಾಗಿದೆ.
![ಸೊಶಿಯಲ್ ಮೀಡಿಯಾ ಮುಖ್ಯಸ್ಥೆ ಸ್ಥಾನದಿಂದ ರಮ್ಯಾ ಔಟ್: ರೋಹನ್ ಗುಪ್ತಾ ನೇಮಕ ಮಾಡಿದ 'ಕೈ'!](https://etvbharatimages.akamaized.net/etvbharat/prod-images/768-512-4582688-thumbnail-3x2-wdfdfdf.jpg)
ರಮ್ಯಾಗೆ ಗೇಟ್ಪಾಸ್
ಮುಂಬರುವ ಮಹಾರಾಷ್ಟ್ರ ಹಾಗೂ ಹರಿಯಾಣ ಹಾಗೂ ಕರ್ನಾಟಕ ಉಪಚುನಾವಣೆ ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್, ಗುಜರಾತ್ ಮೂಲದ ರೋಹನ್ ಗುಪ್ತಾ ಅವರನ್ನು ಸಾಮಾಜಿಕ ಜಾಲತಾಣದ ಮುಖ್ಯಸ್ಥರಾಗಿ ಆಯ್ಕೆ ಮಾಡಲಾಗಿದೆ.
2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲು ಕಂಡ ಬಳಿಕ ರಮ್ಯಾ ಅವರು ಸಕ್ರಿಯ ರಾಜಕೀಯದಿಂದ ದೂರ ಉಳಿದಿದ್ದರು. ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿರುವ ಕೆಸಿ ವೇಣುಗೋಪಾಲ್ ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರಕಟಣೆ ಹೊರಡಿಸಿದ್ದು, ತಕ್ಷಣದಿಂದಲೇ ಈ ಸ್ಥಾನ ಅಲಂಕಾರ ಮಾಡುವಂತೆ ರೋಹನ್ ಗುಪ್ತಾ ಅವರಿಗೆ ತಿಳಿಸಿದ್ದಾರೆ.
Last Updated : Sep 28, 2019, 5:28 PM IST