ಕರ್ನಾಟಕ

karnataka

ETV Bharat / bharat

ಬಾಗ್ದಾದ್​ ಮೇಲೆ ಇರಾನ್​ ಮತ್ತೊಮ್ಮೆ ಕ್ಷಿಪಣಿ ದಾಳಿ... ಅಮೆರಿಕ ಎಚ್ಚರಿಕೆಗೂ ಬಗ್ಗದ ಖಮೇನಿ - ಬಾಗ್ದಾದ್​ನ ಹಸಿರು ವಲಯದ ಮೇಲೆ ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟು ದಿನೇ ದಿನೇ ಉಲ್ಬಣಿಸುತ್ತಿದೆ. ಅಮೆರಿಕ ಹಾಗೂ ಇರಾನ್​ ನಡುವೆ ಯುದ್ಧಕ್ಕೆ ಮುನ್ನುಡಿ ಬರೆಯುವ ಎಲ್ಲಾ ಲಕ್ಷಣಗಳೂ ಕೂಡಾ ಕಾಣುತ್ತಿವೆ. 24 ಗಂಟೆಗಳೊಳಗೆ ಮತ್ತೊಂದು ದಾಳಿಯನ್ನು ಇರಾನ್​ ಕೈಗೊಂಡಿದೆ.

rocket fire that hit baghdads green zone
ಬಾಗ್ದಾದ್​ನ ಹಸಿರು ವಲಯದ ಮೇಲೆ ಬಿದ್ದ ಕ್ಷಿಪಣಿಗಳು

By

Published : Jan 9, 2020, 10:00 AM IST


ಬಾಗ್ದಾದ್​:ಇರಾಕ್​ನ ಮೇಲೆ ಇರಾನ್​ ಮತ್ತೆ ದಾಳಿ ಮಾಡಿದೆ. . ಅಮೆರಿಕವನ್ನು ಗುರಿಯಾಗಿಸಿ ಇರಾಕ್​ನ ರಾಜಧಾನಿ ಬಾಗ್ದಾದ್​ನ ಹಸಿರು ವಲಯದ ಮೇಲೆ ಎರಡು ಕ್ಷಿಪಣಿಗಳ ಮೂಲಕ ದಾಳಿ ನಡೆಸಲಾಗಿದೆ. ಇಲ್ಲಿನ ವಿದೇಶಗಳ ರಾಯಭಾರ ಕಚೇರಿಗಳು, ಸರ್ಕಾರಿ ಇಲಾಖೆಗಳನ್ನು ಗುರಿಯಾಗಿಸಿ ದಾಳಿಸಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ನಗರದಾದ್ಯಂತ ಬಿಗಿ ಭದ್ರತೆ ಒದಗಿಸಲಾಗಿದ್ದು ಪೊಲೀಸರು ಹಾಗೂ ಮಿಲಿಟರಿ ಬೀಡುಬಿಟ್ಟಿದೆ. ಘಟನೆಗೆ ಪ್ರತಿಕ್ರಿಯೆ ನೀಡಿರುವ ಇರಾಕ್​ನ ಸೇನಾ ವಕ್ತಾರರು ''ಎರಡು ಕತ್ಯೂಷಾ ಕ್ಷಿಪಣಿಗಳು ಬಾಗ್ದಾದ್​ನ ಹಸಿರು ವಲಯದ ಮೇಲೆ ದಾಳಿ ನಡೆಸಿವೆ. ಈ ದಾಳಿಯಲ್ಲಿ ಯಾರಿಗೂ ಪ್ರಾಣಾಪಾಯವಾಗಿಲ್ಲ. ಯಾವುದೇ ಪ್ರಮುಖ ಹಾನಿಯೂ ಕೂಡಾ ಜರುಗಿಲ್ಲ'' ಎಂದು ಸ್ಪಷ್ಟಪಡಿಸಿದ್ದಾರೆ.

ಇರಾಕ್​​​ಲ್ಲಿರುವ ಅಮೆರಿಕಾ ಸೇನಾ ನೆಲೆಗಳಾದ ಅಲ್​ ಅಸಾದ್​ ಹಾಗೂ ಇಬ್ರಿಲ್​ ಮೇಲೆ ದಾಳಿ ನಡೆಸಿದ್ದ ಇರಾನ್​ 24 ಗಂಟೆಯೊಳಗೆ ಮತ್ತೊಂದು ದಾಳಿ ನಡೆಸಿದೆ. ಈ ಘಟನೆ ಎರಡೂ ದೇಶಗಳ ನಡುವಿನ ಯುದ್ಧದ ತೀವ್ರತೆಯನ್ನು ಬಿಂಬಿಸುತ್ತಿದೆ. ಅಮೆರಿಕಾದ ಎಚ್ಚರಿಕೆಯನ್ನು ಇರಾನ್ ನಿರ್ಲಕ್ಷಿದೆಯಾ? ಎಂದು ಅನುಮಾನವನ್ನು ಮೂಡಿಸುತ್ತಿದೆ.

ABOUT THE AUTHOR

...view details