ಬ್ಯಾಂಕಾಕ್ (ಥಾಯ್ಲೆಂಡ್):ಬ್ಯಾಂಕಾಕ್ನ ಸೆಂಟ್ರಲ್ ವರ್ಲ್ಡ್ ಮಾಲ್‌ನಲ್ಲಿ ರೋಬೋಟ್‌ಗಳನ್ನು ಬಳಸಲಾಗುತ್ತಿದೆ. ಮಾಲ್‌ನಲ್ಲಿ ಕೊರೊನಾ ವೈರಸ್ ತಡೆಯುವ ಸಲುವಾಗಿ ಈ ರೋಬೋಟ್‌ಗಳನ್ನು ಬಳಸಲಾಗುತ್ತಿದೆ.
ಥಾಯ್ಲೆಂಡ್ ದೇಶವು ತನ್ನ ಶಾಪಿಂಗ್ ಮಾಲ್‌ಗಳನ್ನು ಮತ್ತೆ ತೆರೆಯುತ್ತಿದೆ. ಈ ಸ್ಥಳಗಳನ್ನು ಸುರಕ್ಷಿತವಾಗಿಡಲು ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿದೆ. ಮಾಲ್ಗೆ ಪ್ರವೇಶಿಸುವ ಮೊದಲು ವ್ಯಕ್ತಿಯ ದೇಹದ ತಾಪಮಾನವನ್ನು ಪರೀಕ್ಷಿಸಲು ಮತ್ತು ಅಲ್ಟ್ರಾ ವೈಲೆಟ್ ಲೈಟ್ ಬಳಸಿ ಎಸ್ಕಲೇಟರ್ ಮೂಲಕ ಕೈ ಸ್ವಚ್ಛಗೊಳಿಸಲು ಈ ರೋಬೋಟ್‌ಗಳನ್ನು ಬಳಸಲಾಗುತ್ತಿದೆ.
'ಪಿಪಿ' ಇದು ಸಾರ್ವಜನಿಕರಿಗೆ ಆರೋಗ್ಯದ ಬಗ್ಗೆ ಸಂದೇಶಗಳನ್ನು ನೀಡುತ್ತದೆ. ಹ್ಯಾಂಡ್ ಜೆಲ್ ವಿತರಕಗಳಂತಹ ಸೌಲಭ್ಯಗಳನ್ನು ಹುಡುಕಲು ಜನರಿಗೆ ಸಹಾಯ ಮಾಡುವ 'ಲೈವ್ ಇಂಟೆಲಿಜೆಂಟ್ ಸರ್ವಿಸ್ ಅಸಿಸ್ಟೆಂಟ್' ಅನ್ನು ಸೂಚಿಸುವ 'ಲಿಸಾ' ಇದೆ. 'ಆರ್‌ಒಸಿ' ಅಥವಾ 'ರೋಬೋಟ್ ಫಾರ್ ಕೇರ್' 37.5 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ಉಷ್ಣಾಂಶವನ್ನು ಇದು ಸ್ಕ್ಯಾನ್ ಮಾಡುತ್ತದೆ. ಅಂತಿಮವಾಗಿ 'ಕೆ 9' ಮಾಲ್‌ನ ಹಿಂಭಾಗದಲ್ಲಿದ್ದು, ಹ್ಯಾಂಡ್ ಸ್ಯಾನಿಟೈಸರ್ ಬಾಟಲಿಯೊಂದಿಗೆ ತಿರುಗುತ್ತದೆ.