ಕರ್ನಾಟಕ

karnataka

ETV Bharat / bharat

ವಡೋದರಾ: ಕೋವಿಡ್-19 ರೋಗಿಗಳ ಸೇವೆಗೆ ರೊಬೊಟ್​‌ಗಳ ನಿಯೋಜನೆ

ಕೋವಿಡ್ -19 ರೋಗಿಗಳಿಗೆ ಆಹಾರ ಮತ್ತು ಔಷಧಗಳನ್ನು ಪೂರೈಸಲು ಗುಜರಾತ್‌ನ ವಡೋದರಾದ ಆಸ್ಪತ್ರೆಯೊಂದರಲ್ಲಿ ರೊಬೊಟ್​ಗಳನ್ನು ನಿಯೋಜಿಸಲಾಗಿದೆ. ಈ ರೊಬೊಟ್​‌ಗಳನ್ನು ಕೊರೊನಾ ವೈರಸ್ ವಾರ್ಡ್‌ಗಳಲ್ಲಿ ರೋಗಿಗಳ ತಪಾಸಣೆಗೆ ಕೂಡಾ ಬಳಸಬಹುದಾಗಿದೆ.

robot
robot

By

Published : Jul 18, 2020, 2:30 PM IST

ವಡೋದರಾ (ಗುಜರಾತ್):ಕೋವಿಡ್ -19 ರೋಗಿಗಳಿಗೆ ಆಹಾರ ಮತ್ತು ಔಷಧಗಳನ್ನು ಪೂರೈಸಲು ಗುಜರಾತ್‌ನ ವಡೋದರಾದ ಸರ್ ಸಯಾಜಿರಾವ್ ಗಾಯಕ್ವಾಡ್​ (ಎಸ್‌ಎಸ್‌ಜಿ) ಆಸ್ಪತ್ರೆಯಲ್ಲಿ ಎರಡು ರೊಬೊಟ್​ಗಳನ್ನು ನಿಯೋಜಿಸಲಾಗಿದೆ.

ಆಸ್ಪತ್ರೆಯ ಸಿಬ್ಬಂದಿಗೆ ಸೋಂಕಿನ ಅಪಾಯ ತಗ್ಗಿಸಲು ಮುನ್ನೆಚ್ಚರಿಕೆ ಕ್ರಮವಾಗಿ ಈ ವ್ಯವಸ್ಥೆ ಮಾಡಲಾಗಿದೆ. ಈ ರೊಬೊಟ್​‌ಗಳನ್ನು ಕೊರೊನಾ ವೈರಸ್ ವಾರ್ಡ್‌ಗಳಲ್ಲಿ ರೋಗಿಗಳ ತಪಾಸಣೆಗೆ ಕೂಡಾ ಬಳಸಬಹುದಾಗಿದೆ.

ಶೀಘ್ರದಲ್ಲೇ ಆಸ್ಪತ್ರೆಯ ಆಡಳಿತವು ಪ್ರವೇಶ ದ್ವಾರದಲ್ಲಿ ರೊಬೊಟ್​​ಗಳನ್ನು ಇರಿಸಲಿದ್ದು, ಆಸ್ಪತ್ರೆಯ ಆವರಣಕ್ಕೆ ಪ್ರವೇಶಿಸುವ ಜನರಲ್ಲಿ ಕೋವಿಡ್-19 ರೋಗಲಕ್ಷಣಗಳಿವೆಯೇ ಎಂದು ಈ ರೊಬೊಟ್​​ಗಳು ಪರೀಕ್ಷಿಸಲಿವೆ.

ಒಮ್ಮೆ ಪೂರ್ಣವಾಗಿ ಚಾರ್ಜ್ ಮಾಡಿದಾಗ ಈ ರೊಬೊಟ್​ಗಳು 4 ಗಂಟೆಗಳಿಗಿಂತ ಹೆಚ್ಚು ಕಾಲ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿವೆ.

ABOUT THE AUTHOR

...view details