ಕರ್ನಾಟಕ

karnataka

ETV Bharat / bharat

ಸಿದ್ಧವಾಯ್ತು ಕೊರೊನಾ ನಾಶಪಡಿಸುವ ರೋಬೋ: ಕೊಯಮತ್ತೂರು ಯುವಕರಿಂದ ವಿಭಿನ್ನ ಸಂಶೋಧನೆ - ಕೊಯಮತ್ತೂರು

ಕೊರೊನಾ ವಿರುದ್ಧ ಹೋರಾಡಲು ಹಲವಾರು ಸರ್ಕಾರಗಳು ಹಾಗೂ ಸಂಘ ಸಂಸ್ಥೆಗಳು ಪ್ರಯತ್ನಿಸುತ್ತಿವೆ. ಈಗ ಕೊಯಮತ್ತೂರು ಮೂಲದ ಇಬ್ಬರು ಯುವಕರು ಕೊರೊನಾ ವೈರಸ್​ ಅನ್ನು ನಾಶಪಡಿಸುವ ರೋಬೋಟ್​ ಅನ್ವೇಷಣೆ ಮಾಡಿ ಗಮನ ಸೆಳೆದಿದ್ದಾರೆ.

ultra violet robot
ಕೊರೊನಾ ವೈರಸ್​ ನಾಶಪಡಿಸುವ ರೋಬೋಟ್​

By

Published : Apr 2, 2020, 7:31 PM IST

ಕೊಯಮತ್ತೂರು(ತಮಿಳುನಾಡು):ಕೊರೊನಾ ವಿರುದ್ಧ ಹೋರಾಡಲು ಸರ್ಕಾರವೂ ಸೇರಿದಂತೆ ಹಲವಾರು ಸಂಘ - ಸಂಸ್ಥೆಗಳು ಹೋರಾಡುತ್ತಿವೆ. ಈಗ ಕೊಯಮತ್ತೂರು ಮೂಲದ ಯುವಕರು ಕೊರೊನಾ ವಿರುದ್ಧ ಹೋರಾಡಲು ಒಂದು ರೋಬೋಟ್​ ಅನ್ನು ಸಿದ್ಧಪಡಿಸಿದ್ದಾರೆ.

ಇವರು ಸಿದ್ಧಪಡಿಸಿರುವ ರೋಬೋಟ್​ ಅತಿನೇರಳೆ ಕಿರಣಗಳನ್ನು ಬಳಸಿಕೊಂಡು ಕೊರೊನಾ ವೈರಸ್​ಗಳನ್ನು ನಾಶಪಡಿಸುತ್ತದೆ ಎಂದು ಹೇಳಲಾಗುತ್ತಿದೆ. ಪಿಎಸ್​ಜಿ ತಂತ್ರಜ್ಞಾನ ಕಾಲೇಜಿನ ಹಳೆಯ ವಿದ್ಯಾರ್ಥಿಗಳಾದ ಅರವಿಂದ್ ಹಾಗೂ ಮುತ್ತು ವೆಂಕಲಿಯಪ್ಪನ್​ ಎಂಬುವವರು ಈ ರೋಬೋಟ್​ ಅನ್ನು ಅಭಿವೃದ್ಧಿಪಡಿಸಿದ್ದಾರೆ.

ಕೊರೊನಾ ವೈರಸ್​ ನಾಶಪಡಿಸುವ ರೋಬೋಟ್​

ಈ ರೋಬೋ ಆಸ್ಪತ್ರೆಗಳಲ್ಲಿ ವೈದ್ಯರಿಗೆ ಸಹಕಾರ ನೀಡಲಿದೆ. ಜೊತೆಗೆ ಮನೆಗಳಲ್ಲಿ ಹಾಗೂ ವಾಹನಗಳಲ್ಲೂ ಕೂಡಾ ಬಳಸಬಹುದಾಗಿದೆ. ಈ ಇಬ್ಬರೂ ಯುವಕರು ಇದಕ್ಕೂ ಮೊದಲು ಊಟ ಬಡಿಸುವ, ಖಾಸಗಿ ಕಂಪನಿಗಳನ್ನು ಕಾಯುವ ರೋಬೋಗಳನ್ನು ತಯಾರಿಸಿದ್ದರು. ಈ ರೋಬೋಗಳು ದೇಶದ ವಿವಿಧೆಡೆ ಕಾರ್ಯನಿರ್ವಹಿಸುತ್ತಿವೆ. ಸಿಂಗಾಪುರ ಹಾಗೂ ಬೇರೆ ಬೇರೆ ರಾಷ್ಟ್ರಗಳಿಗೂ ಈ ರೋಬೋವನ್ನು ರಫ್ತು ಮಾಡಲಾಗಿದೆ.

ಭಾರತದಂತಹ ರಾಷ್ಟ್ರಗಳಲ್ಲಿ ಇಂತಹ ರೋಬೋಗಳು ಉಪಯೋಗಕ್ಕೆ ಬರಲಿವೆ. ಒಂದು ರೋಬೋ ಬೆಲೆ 20 ಲಕ್ಷ ರೂಪಾಯಿ ಬೆಲೆ ಬಾಳುತ್ತಿದ್ದು, ಬೃಹತ್​ ಪ್ರಮಾಣದಲ್ಲಿ ಉತ್ಪಾದಿಸಿದರೆ 2 ರಿಂದ 5 ಲಕ್ಷ ರೂಪಾಯಿಗೆ ದಕ್ಕುವಂತೆ ಮಾಡಬಹುದಾಗಿದೆ. ಸದ್ಯಕ್ಕೆ ಸರ್ಕಾರದಿಂದ ಅನುಮತಿ ಪಡೆದುಕೊಳ್ಳಲು ಸುಮಾರು ನಾಲ್ಕೈದು ತಿಂಗಳ ಅವಧಿ ಬೇಕಾಗಬಹುದು ಎನ್ನಲಾಗುತ್ತಿದೆ.

ABOUT THE AUTHOR

...view details