ನವದೆಹಲಿ: ನಿತ್ಯ ಬಾಲಕಿಯರು, ಯುವತಿಯರ ಮೇಲೆ ಅತ್ಯಾಚಾರ ಆಗ್ತಿದೆ. ನಾವು ಎಂತಹ ಸಮಾಜವನ್ನ ಸೃಷ್ಟಿ ಮಾಡುತ್ತಿದ್ದೇವೆ? ದೇಶದ ಪ್ರತಿಯೊಬ್ಬ ನಾಗರಿಕರನ್ನು ರಕ್ಷಣೆ ಮಾಡಬೇಕಾಗಿರುವುದು ಸರ್ಕಾರದ ಕೆಲಸ ಎಂದು ರಾಬರ್ಟ್ ವಾದ್ರೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಒಂದೊಮ್ಮೆ ನಾವು ನಮ್ಮ ದೇಶದಲ್ಲೇ ರಕ್ಷಣೆ ಇಲ್ಲ ಎಂದರೆ, ಮನೆಗಳೇ ಸುರಕ್ಷಿತವಲ್ಲ ಎಂದ ಮೇಲೆ ರಸ್ತೆ ಹಾಗೂ ಹೊರಗೆ ನಾವು ಸುರಕ್ಷಿತವಾಗಿರಲು ಸಾಧ್ಯವೇ..? ಹಗಲು ಹಾಗೂ ರಾತ್ರಿಯೂ ನಾವು ಸುರಕ್ಷಿತ ಇಲ್ಲ ಎಂದಾದರೆ ಹೇಗೆ ಎಂದು ರಾಬರ್ಟ್ ವಾದ್ರಾ ಟ್ವೀಟ್ ಮಾಡಿ ಪ್ರಶ್ನಿಸಿದ್ದಾರೆ.