ಕರ್ನಾಟಕ

karnataka

ETV Bharat / bharat

ಮಳೆಯಿಂದ ರಸ್ತೆ ಹಾಳು... ರೋಗಿಯನ್ನು 25 ಕಿ.ಮೀ ಹೆಗಲ ಮೇಲೆ ಹೊತ್ತು ಆಸ್ಪತ್ರೆಗೆ ಸಾಗಿಸಿದ ಜನ..! - ರಸ್ತೆ ಮಾರ್ಗ ಸಂಪೂರ್ಣ ಹಾಳು

ಮಳೆಯಿಂದ ರಸ್ತೆ ಹಾಳಾದ ಹಿನ್ನೆಲೆಯಲ್ಲಿ ಸುಮಾರು 25 ಕಿ.ಮೀ ರೋಗಿಯನ್ನು ಹೆಗಲ ಮೇಲೆ ಹೊತ್ತು ಆಸ್ಪತ್ರೆ ಸೇರಿಸಿರುವ ಘಟನೆ ಕೇರಳದಲ್ಲಿ ನಡೆದಿದೆ.

ರೋಗಿಯನ್ನು 25 ಕಿ.ಮೀ ಹೆಗಲ ಮೇಲೆ ಹೊತ್ತು ಆಸ್ಪತ್ರೆಗೆ ಸಾಗಿಸಿದ ಜನ..!

By

Published : Sep 14, 2019, 9:20 AM IST

ಇಡುಕ್ಕಿ:ಮಳೆಯಿಂದ ರಸ್ತೆ ಹಾಳಾದ ಕಾರಣ ರೋಗಿಯನ್ನು ಹೆಗಲ ಮೇಲೆ ಹೊತ್ತು ಸುಮಾರು 25 ಕಿ.ಮೀ. ನಡೆದು ಆಸ್ಪತ್ರೆಗೆ ಸೇರಿಸಿರುವ ದಾರುಣ ಘಟನೆ ಕೇರಳ ರಾಜ್ಯದ ಇಡುಕ್ಕಿ ಜಿಲ್ಲೆಯ ಎಡಮಲಕುಕ್ಡಿ ಯಲ್ಲಿ ನಡೆದಿದೆ.

ಅಂಡವಾಂಕುಡಿ ನಿವಾಸಿಯಾದ ನಟರಾಜನ್​ ತೀವ್ರ ಜ್ವರದಿಂದ ಬಳಲುತ್ತಿದ್ದು, ಊರಿನಲ್ಲಿ ರಸ್ತೆ ಸರಿಯಿಲ್ಲದ ಕಾರಣ ಯಾವುದೇ ವಾಹನ ಅಲ್ಲಿಗೆ ಬರಲಾಗಿಲ್ಲ. ಈ ಹಿನ್ನೆಲೆ ಸುಮಾರು 50 ಜನರು ಸೇರಿ ಬಟ್ಟೆಯಿಂದ ತಯಾರಿಸಿದ ಸ್ಟ್ರೆಚರ್​ ನಲ್ಲಿ ಕಾಡಿನ ಮಾರ್ಗದ ಮೂಲಕ ಅವರನ್ನ ಸುಮಾರು 25 ಕಿ.ಮೀ. ದೂರ ಹೆಗಲ ಮೇಲೆ ಹೊತ್ತು ಆಸ್ಪತ್ರೆಗೆ ದಾಖಲಿಸಿದ್ದಾರೆ.

ರೋಗಿಯನ್ನು 25 ಕಿ.ಮೀ ಹೆಗಲ ಮೇಲೆ ಹೊತ್ತು ಆಸ್ಪತ್ರೆಗೆ ಸಾಗಿಸಿದ ಜನ..!
ಕಳೆದ ಆಗಸ್ಟ್​ನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಎಡಮಲಕುಕ್ಡಿ ಹಾಗೂ ಪೆಟ್ಟಿಮುಡಿ ನಡುವಿನ ರಸ್ತೆ ಮಾರ್ಗ ಸಂಪೂರ್ಣ ಹಾಳಾಗಿದೆ. ಹೀಗಾಗಿ ಈ ಭಾಗದ ಜನ ಕಾಡು ಪ್ರಾಣಿಗಳಿರುವ ಕಾಡಿನ ಮಧ್ಯೆಯೇ ಕಾಲ್ನಡಿಗೆಯಲ್ಲೆ ಜೀವಭಯದಿಂದ ತೊರುಗಾಡುವಂತ ದಾರುಣ ಪರಿಸ್ಥಿತಿ ಎದುರಾಗಿದ್ದು, ತಕ್ಷಣವೇ ರಸ್ತೆ ಮಾರ್ಗ ಸರಿ ಪಡಿಸುವಂತೆ ಇಲ್ಲಿನ ಜನ ಒತ್ತಾಯಿಸಿದ್ದಾರೆ.

ABOUT THE AUTHOR

...view details