ಕರ್ನಾಟಕ

karnataka

ETV Bharat / bharat

ಚಿತಾಭಸ್ಮ ವಿಸರ್ಜಿಸಲು ತೆರಳಿದ ಒಂದೇ ಕುಟುಂಬದ ನಾಲ್ವರು ಮಸಣಕ್ಕೆ - ಒಂದೇ ಕುಟುಂಬದ ನಾಲ್ವರು ರಸ್ತೆ ಅಪಘಾತದಲ್ಲಿ ಮೃತ

ಮಿಶ್ರಮ್​ ಮೀನಾ ಎಂಬಾತ ಕ್ಯಾನ್ಸರ್​ನಿಂದ ಮೃತಪಟ್ಟಿದ್ದನು. ಅವನ ಚಿತಾಭಸ್ಮ ವಿಸರ್ಜಿಸಲು ಬಂದವರು ರಸ್ತೆ ಅಪಘಾತದಲ್ಲಿ ಮಸಣ ಸೇರಿದ್ದಾರೆ.

ಅಪಘಾತ
ಅಪಘಾತ

By

Published : Jan 6, 2021, 7:47 AM IST

ಅಲ್ವಾರ್(ಉತ್ತರ ಪ್ರದೇಶ): ಚಿತಾಭಸ್ಮವನ್ನು ವಿಸರ್ಜಿಸಲು ತೆರಳಿದ ಒಂದೇ ಕುಟುಂಬದ ನಾಲ್ವರು ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ಹತ್ರಾಸ್‌ನಲ್ಲಿ ನಡೆದಿದೆ.

ರಾಜಸ್ಥಾನ ಬುಜ್‌ಪುರಿ ಮೂಲದ ಕುಟುಂಬವೊಂದು ತಮ್ಮ ಕುಟುಂಬದಲ್ಲಿ ಮೃತರಾದ ಒಬ್ಬರ ಚಿತಾಭಸ್ಮವನ್ನು ಬಿಡಲು ಉತ್ತರ ಪ್ರದೇಶದ ಸೂರ್ಜಿಗೆ ತೆರಳುತ್ತಿದ್ದರು. ಈ ಸಂದರ್ಭ ಅಪಘಾತ ನಡೆದು, ನಾಲ್ವರು ದಾರುಣವಾಗಿ ಮೃತಪಟ್ಟಿದ್ದಾರೆ.

ಮಿಶ್ರಮ್​ ಮೀನಾ ಎಂಬಾತ ಕ್ಯಾನ್ಸರ್​ನಿಂದ ಮೃತಪಟ್ಟಿದ್ದನು. ಅವನ ಚಿತಾಭಸ್ಮವನ್ನು ವಿಸರ್ಜಿಸಲು ಬಂದವರು ಮಸಣ ಸೇರಿದ್ದಾರೆ. ಬಿಎಸ್​ಎಫ್​ ಜವಾನ ರಂಬಾಕ್ಷಿ ಫೌಜಿ, ಮೃತನ ಮಗಳು ರಾಮ್ನಿವಾಸ್ ಮೀನಾ, ಆಕೆಯ ಸೋದರ ಮಾವ ಸಲೋಲಿ ಹಾಗೂ ಕಾರು ಚಾಲಕ ಮದನ್ ಸೈನಿ ಮೃತಪಟ್ಟಿದ್ದಾರೆ. ಕುಟುಂಬದ ಉಳಿದ ಐವರು ಸಣ್ಣಪುಟ್ಟ ಗಾಯಗಳಿಂದ ಬಚಾವ್​ ಆಗಿದ್ದಾರೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮೃತರ ದೇಹಗಳನ್ನು ಸಂಜೆ ಅವರ ಕಳುಹಿಸಿಕೊಡಲಾಯಿತು. ಬಿಎಸ್​ಎಫ್​ ಜವಾನ ರಂಬಾಕ್ಷಿ ಫೌಜಿ ಅವರ ಅಂತಿಮ ಸಂಸ್ಕಾರವನ್ನು ಸರ್ಕಾರಿ ಸಕಲ ಗೌರವದೊಂದಿಗೆ ನೆರವೇರಿಸಿದರು.

ABOUT THE AUTHOR

...view details